Select Your Language

Notifications

webdunia
webdunia
webdunia
webdunia

ಆರ್ ಸಿಬಿ ವಿರುದ್ಧ ಸೋಲಿನ ಬೇಸರದ ನಡುವೆ ಬೈಕ್ ಓಡಿಸಿ ರಿಲ್ಯಾಕ್ಸ್ ಆದ ಧೋನಿ

Instagram

sampriya

ಬೆಂಗಳೂರು , ಮಂಗಳವಾರ, 21 ಮೇ 2024 (15:56 IST)
Photo By Instagram
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸೋಲು ಅನುಭವಿಸಿ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಎಂ ಎಸ್‌ ಧೋನಿ ಅವರು ಬೈಕ್‌ ರೈಡ್‌ ಮಾಡಿ ಎಂಜಾಯ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಟೂರ್ನಿ ನಡೆದ ಒಂದು ದಿನದ ನಂತರ ಎಂಎಸ್ ಧೋನಿ ತಮ್ಮ ತವರು ರಾಂಚಿಗೆ ಮರಳಿದರು. ಇದೀಗ ಚೆನ್ನೈ ತಂಡದ ಮಾಜಿ ನಾಯಕ ಧೋನಿ ಅವರು ರಾಂಚಿಯಲ್ಲಿ ಬೈಕ್ ರೈಡ್ ಮಾಡುತ್ತಿರುವುದು ಕಂಡುಬಂದಿದೆ.

"ರಾಂಚಿಯಲ್ಲಿ ಎಂಎಸ್ ಧೋನಿ," X ಹ್ಯಾಂಡಲ್ @StanMSD ನಲ್ಲಿ ಹಂಚಿಕೊಂಡ ವೀಡಿಯೊದ ಧೋನಿ ಅವರು ಹಸಿರು ಬಣ್ಣದ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಲ್ಮೆಟ್‌ ಧರಿಸಿ ಬೈಕ್‌ ಓಡಿಸಿದ ಅವರು ತನ್ನ ಮನೆಗೆ ಪ್ರವೇಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಮೇ 20 ರಂದು ಹಂಚಿಕೊಂಡ ಈ ವಿಡಿಯೋಈ 1.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2,600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕಮೆಂಟ್‌ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಪ್ಲೇ ಆಫ್ ನಲ್ಲಿ ಆರ್ ಸಿಬಿ ಸಾಧನೆ ಇದುವರೆಗೆ ಹೇಗಿತ್ತು