Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಪ್ಲೇ ಆಫ್ ನಲ್ಲಿ ಆರ್ ಸಿಬಿ ಸಾಧನೆ ಇದುವರೆಗೆ ಹೇಗಿತ್ತು

RCB vs RR

Krishnaveni K

ಅಹಮ್ಮದಾಬಾದ್ , ಮಂಗಳವಾರ, 21 ಮೇ 2024 (14:10 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಸೋತ ತಂಡ ನೇರವಾಗಿ ಟೂರ್ನಿಯಿಂದ ಹೊರಬೀಳಲಿದೆ.  ಇದುವರೆಗೆ ಆರ್ ಸಿಬಿ ಮೂರು ಬಾರಿ ಎಲಿಮಿನೇಟರ್ ಪಂದ್ಯವಾಡಿದೆ. ಈ ಪೈಕಿ ಗೆದ್ದಿದ್ದು ಒಂದು ಬಾರಿ ಮಾತ್ರ. ಹೀಗಾಗಿ ಈಗ ಎಲಿಮಿನೇಟರ್ ಪಂದ್ಯವಾಡಲು ಅರ್ಹತೆ ಪಡೆದಿದೆ ಎಂಬ ಮಾತ್ರಕ್ಕೆ ಮೈಮರೆಯುವಂತಿಲ್ಲ.

ಇದಕ್ಕೆ ಮೊದಲು ಆರ್ ಸಿಬಿ 2020, 2021 ಮತ್ತು 2022 ರಲ್ಲಿ ಎಲಿಮಿನೇಟರ್ ಗೆ ಅರ್ಹತೆ ಪಡೆದಿತ್ತು. ಈ ಪೈಕಿ 2022 ರಲ್ಲಿ ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆದಿತ್ತು. ಆದರೆ ಈ ಪಂದ್ಯದಲ್ಲಿ ಸೋತು ಫೈನಲ್ ಪ್ರವೇಶಿಸಲಾಗದೇ ಟೂರ್ನಿಯಿಂದ ಹೊರಬಿದ್ದಿತ್ತು.

ಆದರೆ ಈ ಬಾರಿ ಆರ್ ಸಿಬಿ ಕತೆಯೇ ಬೇರೆ. ಆರಂಭಿಕ ಪಂದ್ಯದಲ್ಲಿ ಸತತವಾಗಿ ಸೋತು ಲೀಗ್ ಹಂತದಲ್ಲೇ ಹೊರನಡೆಯುವ ಭೀತಿಯಲ್ಲಿದ್ದ ತಂಡ ಇದೀಗ ಸತತವಾಗಿ ಆರು ಪಂದ್ಯ ಗೆದ್ದು ಉತ್ಸಾಹದಲ್ಲಿದೆ. ಹೀಗಾಗಿ ಈ ಬಾರಿ ಎಲಿಮಿನೇಟರ್ ಪಂದ್ಯವನ್ನು ಗೆಲ್ಲಬಹುದು ಎಂಬ ವಿಶ್ವಾಸವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮುಂದಿನ ಕೋಚ್ ಆಯ್ಕೆಯಲ್ಲಿ ಧೋನಿಯ ಪಾತ್ರವೇನು