Publish Date: Mon, 20 May 2024 (11:34 IST)
Updated Date: Mon, 20 May 2024 (11:36 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು ಇದೀಗ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ. ಪ್ಲೇ ಆಫ್ ಪಂದ್ಯಗಳು ಯಾವೆಲ್ಲಾ ತಂಡಗಳ ನಡುವೆ, ವೇಳಾಪಟ್ಟಿ ಇಲ್ಲಿದೆ.
ನಿನ್ನೆಗೆ ಐಪಿಎಲ್ 2024 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ವಿರುದ್ಧ ಭರ್ಜರಿಯಾಗಿ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಪ್ಲೇ ಆಫ್ ಗೇರಿತು. ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಯಿತು. ಇದರಿಂದಾಗಿ ರಾಜಸ್ಥಾನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮೊನ್ನೆ ಸಿಎಸ್ ಕೆ ವಿರುದ್ಧ ಗೆದ್ದ ಆರ್ ಸಿಬಿ ನಾಲ್ಕನೇ ಸ್ಥಾನಿಯಾಗಿದೆ. ಇದರೊಂದಿಗೆ ಕೆಕೆಆರ್ ಮೊದಲ ತಂಡವಾಗಿ, ಹೈದರಬಾದ್ ಎರಡನೇ ತಂಡವಾಗಿ, ರಾಜಸ್ಥಾನ್ ಮೂರನೇ ತಂಡವಾಗಿ ಮತ್ತು ಆರ್ ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಗೇರಿದೆ.
ಇದೀಗ ನಾಳೆ ಮೊದಲ ಪ್ಲೇ ಆಫ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವೆ ಪಂದ್ಯ ನಡೆಯಲಿದೆ. ಎರಡನೇ ಪ್ಲೇ ಆಫ್ ಪಂದ್ಯ ಆರ್ ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಬುಧವಾರ ನಡೆಯಲಿದೆ. ಈ ಎರಡೂ ಪಂದ್ಯಗಳು ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.