Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ ಗೆ ಟಾಟಾ ಗುಡ್ ಬೈ ಸುಳಿವು ಕೊಟ್ಟ ರೋಹಿತ್ ಶರ್ಮಾ

Rohit Sharma

Krishnaveni K

ಮುಂಬೈ , ಸೋಮವಾರ, 20 ಮೇ 2024 (10:34 IST)
ಮುಂಬೈ: ಮುಂಬೈ ಇಂಡಿಯನ್ಸ್ ಯಶಸ್ವೀ ನಾಯಕರಾಗಿದ್ದ ರೋಹಿತ್ ಶರ್ಮಾ ಮುಂದಿನ ಆವೃತ್ತಿಯಲ್ಲಿ ಈ ಫ‍್ರಾಂಚೈಸಿ ಪರ ಐಪಿಎಲ್ ಆಡುವುದು ಅನುಮಾನವೆನ್ನಲಾಗುತ್ತಿದೆ. ಇದಕ್ಕೆ ಪುರಾವೆ ನೀಡುವಂತಹ ಪೋಸ್ಟ್ ಒಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಈ ಬಾರಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿತ್ತು. ಆದರೆ ಇದು ಸ್ವಲ್ಪವೂ ಫಲಗೂಡಲಿಲ್ಲ. ಮುಂಬೈ ಈ ಬಾರಿ ಕೊನೆಯ ಸ್ಥಾನಿಯಾಗಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.

ರೋಹಿತ್ ಶರ್ಮಾರನ್ನು ತಂಡದ ನಾಯಕತ್ವದಿಂದ ಕಿತ್ತು ಹಾಕಿದ ಮೇಲೆ ಮುಂಬೈ ತಂಡದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇತ್ತೀಚೆಗೆ ರೋಹಿತ್ ಶರ್ಮಾ ವೈರಲ್ ವಿಡಿಯೋವೊಂದರಲ್ಲಿ ಇದು ನನಗೆ ಕೊನೆಯ ಟೂರ್ನಿ ಎಂದಿದ್ದರು. ಹೀಗಾಗಿ ಮುಂದಿನ ಐಪಿಎಲ್ ಗೆ ಅವರು ಬೇರೆ ತಂಡ ಸೇರುವುದು ಖಚಿತ ಎಂಬ ಊಹಾಪೋಹಗಳಿವೆ.

ಇದೆಲ್ಲಾ ಬೆಳವಣಿಗೆ ನಡುವೆ ರೋಹಿತ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಫೋಟೋ ಪ್ರಕಟಿಸಿದ್ದಾರೆ. ಇದನ್ನು ನೋಡಿದರೆ ರೋಹಿತ್ ಅಭಿಮಾನಿಗಳಿಗೆ ಕೊನೆಯದಾಗಿ ಒಂದು ಧನ್ಯವಾದ ಹೇಳಿ ಮುಂದಿನ ವರ್ಷಕ್ಕೆ ಮುಂಬೈ ಪರ ಆಡುತ್ತಿಲ್ಲ ಎಂದು ಸುಳಿವು ನೀಡಿರಬಹುದೇ ಎಂಬ ಅನುಮಾನ ಮೂಡಿದೆ. ಮುಂದಿನ ವರ್ಷ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ರಿಲೀಸ್ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಗೆಲುವಿನ ಬೆನ್ನಲ್ಲೇ ಸಿಎಸ್ ಕೆ ಡ್ರೆಸ್ಸಿಂಗ್ ರೂಂಗೆ ಹೋಗಿದ್ದೇಕೆ ವಿರಾಟ್ ಕೊಹ್ಲಿ