Select Your Language

Notifications

webdunia
webdunia
webdunia
webdunia

ಗೆಲ್ಲುವ ತಾಕತ್ತು ಬರಲ್ಲ: ಸೋತ ಆರ್ ಸಿಬಿಗೆ ಹಂಗಿಸಿದ ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು

Ambati Rayudu

Krishnaveni K

ಅಹಮ್ಮದಾಬಾದ್ , ಗುರುವಾರ, 23 ಮೇ 2024 (10:57 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ ಸಿಬಿ ಸೋತ ಬೆನ್ನಲ್ಲೇ ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು ಬೆಂಗಳೂರು ತಂಡವನ್ನು ಹಂಗಿಸಿದ್ದಾರೆ.

ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ತಂಡವನ್ನು ಸೋಲಿಸಿ ಆರ್ ಸಿಬಿ ಪ್ಲೇ ಆಫ್ ಗೇರಿತ್ತು. ಈ ಗೆಲುವಿನ ಬಳಿಕ ಆರ್ ಸಿಬಿ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಸಿಎಸ್ ಕೆ ಅಭಿಮಾನಿಗಳಿಗೆ ಆರ್ ಸಿಬಿ ಅಭಿಮಾನಿಗಳ ಸಂಭ್ರಮ ಕಿರಿ ಕಿರಿಯಾಗಿತ್ತು. ಧೋನಿಗೆ ಕೈಕುಲುಕುವ ಸೌಜನ್ಯವೂ ತೋರಲಿಲ್ಲ ಎಂದು ಆರ್ ಸಿಬಿ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದರು.

ಆರ್ ಸಿಬಿ ವಿರುದ್ಧ ಸಿಎಸ್ ಕೆ ಸೋಲುತ್ತಿದ್ದಂತೇ ಕಾಮೆಂಟರಿ ಮಾಡುತ್ತಿದ್ದ ಅಂಬಟಿ ರಾಯುಡು ಬೇಸರದಿಂದ ಕುಸಿದು ಕುಳಿತಿದ್ದರು. ಪ್ಲೇ ಆಫ್ ಪಂದ್ಯಕ್ಕೆ ಮುನ್ನ ಸಿಎಸ್ ಕೆ ಮಾಜಿ ಆಟಗಾರ ಅಂಟಿ ರಾಯುಡು ಈ ಪಂದ್ಯವನ್ನು ಆರ್ ಸಿಬಿ ಗೆಲ್ಲಲ್ಲ ಎಂದಿದ್ದರು.

ಇದೀಗ ರಾಜಸ್ಥಾನ್ ವಿರುದ್ಧ ಸೋತ ಬೆನ್ನಲ್ಲೇ ಅವರು ಆರ್ ಸಿಬಿಯನ್ನು ಹಂಗಿಸಿದ್ದಾರೆ. ಸಿಎಸ್ ಕೆಯನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಗೆದ್ದಂತಾಗುವುದಿಲ್ಲ. ಪ್ಲೇ ಆಫ್ ನಲ್ಲಿ ಚೆನ್ನಾಗಿ ಆಡಿ ಗೆಲ್ಲಬೇಕು. ಐಪಿಎಲ್ ಟ್ರೋಫಿ ಗೆದ್ದವರು ಯಾರೂ ಸಂಭ್ರಮಾಚರಣೆ, ಆಕ್ರಮಣಕಾರೀ ವರ್ತನೆಯಿಂದ ಗೆದ್ದಿಲ್ಲ. ಪ್ಲೇ ಆಫ್ ನಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದು ಆರ್ ಸಿಬಿಗೆ ಟಾಂಗ್ ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರಾಜಸ್ಥಾನ್ ತಂಡದಲ್ಲಿ ಯಾರಿಗೂ ಹುಷಾರಿಲ್ಲ, ನಾನೂ 100% ಫಿಟ್ ಇಲ್ಲ ಎಂದ ಸಂಜು ಸ್ಯಾಮ್ಸನ್