Select Your Language

Notifications

webdunia
webdunia
webdunia
webdunia

ಐಪಿಎಲ್ 2024: ರಾಜಸ್ಥಾನ್ ತಂಡದಲ್ಲಿ ಯಾರಿಗೂ ಹುಷಾರಿಲ್ಲ, ನಾನೂ 100% ಫಿಟ್ ಇಲ್ಲ ಎಂದ ಸಂಜು ಸ್ಯಾಮ್ಸನ್

Sanju Samson

Krishnaveni K

ಅಹಮ್ಮದಾಬಾದ್ , ಗುರುವಾರ, 23 ಮೇ 2024 (10:20 IST)
Photo Courtesy: X
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆದ್ದ ಸಂಭ್ರಮದ ನಡುವೆಯೇ ರಾಜಸ್ಥಾನ್ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಶಾಕಿಂಗ್ ವಿಚಾರವೊಂದನ್ನು ಬಾಯ್ಬಿಟ್ಟಿದ್ದಾರೆ.

ರಾಜಸ್ಥಾನ್‍ ರಾಯಲ್ಸ್ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ ಗಳಿಂದ ಗೆದ್ದು ಇದೀಗ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ ಈ ಮಹತ್ವದ ಪಂದ್ಯಕ್ಕೆ ಮುನ್ನ ರಾಜಸ್ಥಾನ್ ತಂಡದಲ್ಲಿ ಯಾರೂ ಆರಾಮವಾಗಿಲ್ಲ ಎಂಬ ವಿಚಾರವನ್ನು ಸಂಜು ಹೊರಹಾಕಿದ್ದಾರೆ.

ಆರ್ ಸಿಬಿ ವಿರುದ್ಧ ಗೆದ್ದ ಬಳಿಕ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್ ‘ನಾನು ಶೇ.100 ರಷ್ಟು ಫಿಟ್ ಆಗಿಲ್ಲ. ಇಡೀ ಡ್ರೆಸ್ಸಿಂಗ್ ರೂಂನಲ್ಲಿ ಯಾರಿಗೂ ಆರಾಮವಿಲ್ಲ. ಹಲವರು ಕೆಮ್ಮುತ್ತಿದ್ದಾರೆ, ಹಲವರಿಗೆ ಆರಾಮವಿಲ್ಲ’ ಎಂದು ಸಂಜು ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡಾ ಪಂದ್ಯದ ಬಳಿಕ ಕೆಲವು ದಿನಗಳಿಂದ ನನಗೆ ಕೆಳ ಹೊಟ್ಟೆನೋವು ಸಮಸ್ಯೆ ಕಾಡುತ್ತಿತ್ತು. ಇದರ ನಡುವೆಯೂ ಈ ವಯಸ್ಸಿನಲ್ಲಿ ಟಿ20 ಕ್ರಿಕೆಟ್ ಗೆ ಒಗ್ಗಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ರಾಜಸ್ಥಾನ್ ಗೆ ಈಗ ಅಂತಿಮ ಹಂತದ ಪಂದ್ಯಗಳ ಕಠಿಣ ಸವಾಲು ಇದೆ. ಅದರ ಮುಂದೆ ತಂಡದಲ್ಲಿ ಅನಾರೋಗ್ಯ ಚಿಂತೆಗೆ ಕಾರಣವಾಗಿದೆ. ಅದೂ ಅಲ್ಲದೆ, ಸಂಜು ಸ್ಯಾಮ್ಸನ್ ಟೀಂ ಇಂಡಿಯಾದ ವಿಶ್ವಕಪ್ ತಂಡದ ಭಾಗವಾಗಿದ್ದಾರೆ. ಹೀಗಾಗಿ ಆಟಗಾರರು ಫಿಟ್ ಆಗಿರುವುದು ಬಹುಮುಖ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Dinesh Karthik: ಡಿಕೆ ಬಾಸ್ ಗೆ ಭಾವುಕ ವಿದಾಯ ಹೇಳಿದ ಆರ್ ಸಿಬಿ ಆಟಗಾರರು, ಫ್ಯಾನ್ಸ್