Publish Date: Mon, 02 Sep 2024 (15:00 IST)
Updated Date: Mon, 02 Sep 2024 (15:03 IST)
ಮುಂಬೈ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ವೃತ್ತಿ ಜೀವನವನ್ನೇ ಹಾಳು ಮಾಡ್ತಿದ್ದಾರೆ ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮೇಲೆ ನೆಟ್ಟಿಗರು ಕಿಡಿ ಕಾರಿದ್ದಾರೆ.
ಧೋನಿ ನನ್ನ ಮಗನ ವೃತ್ತಿ ಜೀವನವನ್ನೇ ಹಾಳು ಮಾಡಿದ್ದಾನೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ ಬೆನ್ನಲ್ಲೇ ಈಗ ಯುವಿ ತಂದೆಯ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದಾರೆ. ಈ ಯೋಗರಾಜ್ ಸಿಂಗ್ ವಿಷಕಾರೀ ಮನಸ್ಸಿನ ವ್ಯಕ್ತಿ. ಇವರಿಂದ ನಿಮ್ಮ ಮಗನನ್ನು ದೂರವಿಡಿ ಎಂದು ನೆಟ್ಟಿಗರು ಸಚಿನ್ ಗೆ ಸಲಹೆ ನೀಡಿದ್ದಾರೆ.
ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಅವರಿಗೆ ಯೋಗರಾಜ್ ಸಿಂಗ್ ಅವರೇ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ಯೋಗರಾಜ್ ಸಿಂಗ್ ರಂತಹ ವ್ಯಕ್ತಿಯಿಂದ ತರಬೇತಿ ಪಡೆಯುವುದು ಉತ್ತಮವಲ್ಲ. ಅವರ ನಿಮ್ಮ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡಬಹುದು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಈ ಹಿಂದೊಮ್ಮೆ ಯೋಗರಾಜ್ ಸಿಂಗ್ ಇದೇ ರೀತಿ ಯುವರಾಜ್ ಸಿಂಗ್ ವೃತ್ತಿ ಜೀವನ ಹಾಳು ಮಾಡಿದ್ದು ಧೋನಿ ಎಂದು ವಿವಾದ ಸೃಷ್ಟಿಸಿದ್ದರು. ಇದಾದ ಬಳಿಕ ಸ್ವತಃ ಯುವರಾಜ್ ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ. ನಮ್ಮ ತಂದೆಗೆ ಏನು ಅನಿಸಿದೆಯೋ ಅವರ ಅನಿಸಿಕೆ ಹೇಳಿದ್ದಾರಷ್ಟೇ ಎಂದಿದ್ದರು. ಇದೀಗ ಮತ್ತೊಮ್ಮೆ ಯೋಗರಾಜ್ ಸಿಂಗ್ ಅದೇ ಹೇಳಿಕೆ ನೀಡಿ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.