ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಆಲ್ ಟೈಮ್ ಫೇವರಿಟ್ ಟೀಂ ಘೋಷಿಸಿದ್ದು ಇದರಲ್ಲಿ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾರನ್ನೇ ಕಡೆಗಣಿಸಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ. ಟಿ20 ವಿಶ್ವಕಪ್ ಗೆಲುವಿಗೆ ಅವರೇ ಪ್ರಮುಖ ಕಾರಣ ಎನ್ನಬಹುದು. ರೋಹಿತ್ ಶರ್ಮಾ ಕೂಡಾ ನಾಯಕರಾಗಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಆದರೆ ಈ ಇಬ್ಬರನ್ನೂ ಗಂಭೀರ್ ತಮ್ಮ ಆಲ್ ಟೈಮ್ ತಂಡದಿಂದ ಕಡೆಗಣಿಸಿದ್ದಾರೆ.
ಆದರೆ ಈ ಹಿಂದೆಯೆಲ್ಲಾ ತಾವು ಟೀಕಿಸುತ್ತಲೇ ಇದ್ದ ವಿರಾಟ್ ಕೊಹ್ಲಿ ಮತ್ತು ಧೋನಿಯನ್ನು ತಮ್ಮ ಆಲ್ ಟೈಮ್ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಕೇವಲ ರೋಹಿತ್, ಬುಮ್ರಾ ಮಾತ್ರವಲ್ಲ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿಯಂತಹ ದಿಗ್ಗಜ ಕ್ರಿಕೆಟಿಗರನ್ನೂ ಕೈ ಬಿಟ್ಟಿದ್ದಾರೆ.
ಆದರೆ ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, 2011 ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮುಂತಾದವರು ಗಂಭೀರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಂಭೀರ್ ಘೋಷಿಸಿದ ಆಲ್ ಟೈಮ್ ತಂಡ ಹೀಗಿದೆ:
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್.