Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾಗಾಗಿ 50 ಕೋಟಿ ಮೀಸಲಿಡಲಿದೆ ಈ ಐಪಿಎಲ್ ಫ್ರಾಂಚೈಸಿ

Rohit Sharma

Krishnaveni K

ನವದೆಹಲಿ , ಶನಿವಾರ, 24 ಆಗಸ್ಟ್ 2024 (15:12 IST)
ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ತಂಡ ರಿಲೀಸ್ ಮಾಡಿದರೆ ಅವರನ್ನು ಖರೀದಿ ಮಾಡಲು ಬೇರೆ ತಂಡಗಳು ಹೊಂಚು ಹಾಕಿ ಕಾಯುತ್ತಿವೆ.
 

ರೋಹಿತ್ ಶರ್ಮಾಗೆ ಎಷ್ಟು ಬೇಡಿಕೆಯಿದೆ ಎಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ಖರೀದಿ ಮಾಡಲು 50 ಕೋಟಿ ರೂ. ಮೀಸಲಿಟ್ಟಿದೆಯಂತೆ! ಹಾಗಿದ್ದರೆ ಈ ಬಾರಿ ಕೊಹ್ಲಿ, ರೋಹಿತ್ ರಂತಹ ತಾರೆಯರು ಹರಾಜಿಗೆ ಬಿದ್ದರೆ ಅವರು ಯಾವ ಮಟ್ಟಿಗೆ ದಾಖಲೆಯ ಮೊತ್ತ ಜೇಬಿಗಿಳಿಸಬಹುದು ಅಂದಾಜು ಮಾಡಿ.

ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ರೋಹಿತ್ ರನ್ನು ಖರೀದಿಸಲು ಕಾದು ನಿಂತಿದೆ. ಆದರೆ ಮುಂಬೈ ತಂಡ ಅವರನ್ನು ರಿಲೀಸ್ ಮಾಡುವ ಬಗ್ಗೆ ಇದುವರೆಗೆ ಏನೂ ಹೇಳಿಲ್ಲ. ಆದರೆ ಮುಂಬೈ ತಂಡದಲ್ಲಿ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಮುಂದಿನ ಸೀಸನ್ ಗೆ ಬೇರೆ ತಂಡದ ಪರ ಆಡಬಹುದು ಎಂದೇ ಎಲ್ಲರ ಅನುಮಾನ.

ಕಳೆದ ಬಾರಿಯೇ ಅವರು ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಜೊತೆ ಮುಂಬೈ ಜೊತೆ ಇದು ಕೊನೆಯ ಆವೃತ್ತಿ ಎನ್ನುವರ್ಥದಲ್ಲಿ ಮಾತನಾಡಿದ್ದು ವೈರಲ್ ಆಗಿತ್ತು. ಒಂದು ವೇಳೆ ರೋಹಿತ್ ಈಗ ಯಾವುದೇ ಫ್ರಾಂಚೈಸಿಗೆ ಹೋದರೂ ಅಲ್ಲಿ ಅವರು ನಾಯಕರಾಗುವುದು ಖಚಿತ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ವಿರುದ್ಧ ಕಿಡಿ ಕಾರುತ್ತಿದ್ದ ಕುಸ್ತಿಪಟು ವಿನೇಶ್ ಫೋಗಟ್ ಈಗ ಅಧಿಕೃತವಾಗಿ ಕಾಂಗ್ರೆಸ್ ಗೆ