ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಅವರ ಅಗ್ರೆಷನ್ ನೋಡಿ ಅಪ್ಪನಂತಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಎದುರಾಳಿ ಆಟಗಾರರ ಮುಂದೆ ಆಕ್ರಮಣಕಾರಿ ವರ್ತನೆ ತೋರಿದವರಲ್ಲ. ಎದುರಾಳಿಗಳೇ ಕೆಣಕಿದರೂ ತಮ್ಮ ನಗುತ್ತಲೇ ತಲೆಯಾಡಿಸಿ ತಮ್ಮ ಆಟದ ಮೇಲಷ್ಟೇ ಗಮನ ಕೊಡುತ್ತಿದ್ದರು. ಅವರನ್ನು ಸ್ಲೆಡ್ಜಿಂಗ್ ಮಾಡಲು ಬಂದರೂ ಬ್ಯಾಟ್ ಮೂಲಕವಷ್ಟೇ ಉತ್ತರ ಕೊಡುತ್ತಿದ್ದರು.
ಆದರೆ ಪುತ್ರ ಅರ್ಜುನ್ ತಾನು ಅಪ್ಪನಂತೆ ಶಾಂತ ಮೂರ್ತಿಯಲ್ಲ ಎಂದು ನಿನ್ನೆಯ ಪಂದ್ಯದಲ್ಲಿ ತೋರಿಸಿಕೊಟ್ಟರು. ವೇಗದ ಬೌಲಿಂಗ್ ಮಾಡುವ ಅರ್ಜುನ್ ತೆಂಡುಲ್ಕರ್ ಬಾಲ್ ಮಾಡಿದ ಬಳಿಕ ಕ್ರೀಸ್ ಬಿಟ್ಟು ನಿಂತಿದ್ದ ಲಕ್ನೋ ಬ್ಯಾಟಿಗ ಮಾರ್ಕ್ ಸ್ಟಾಯ್ನಿಸ್ ನತ್ತ ಚೆಂಡು ಎಸೆಯುವಂತೆ ಎಚ್ಚರಿಸಿ ದಿಟ್ಟಿಸಿ ನೋಡಿದ್ದಾರೆ.
ಅವರ ಈ ಅಗ್ರೆಷನ್ ನೋಡಿ ಸ್ಟಾಯ್ನಿಸ್ ಕೂಡಾ ಅಚ್ಚರಿಪಟ್ಟಿದ್ದಾರೆ. ಇಷ್ಟು ದಿನ ಬೆಂಚ್ ಕಾಯಿಸಿದ್ದ ಅರ್ಜುನ್ ತೆಂಡುಲ್ಕರ್ ಇದೇ ಮೊದಲ ಬಾರಿಗೆ ಈ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದಿದ್ದರು. ಇದಕ್ಕಿಂತ ಮೊದಲು ಅವರು ಐಪಿಎಲ್ ನಲ್ಲಿ ನಾಲ್ಕು ಪಂದ್ಯಗಳನ್ನಾಡಿ ನಾಲ್ಕು ವಿಕೆಟ್ ಕಬಳಿಸಿದ್ದರು.