Daily Horoscope

Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯ ಬರುತ್ತಿದ್ದಂತೇ ಎದ್ದು ಹೋದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್

Rohit Sharma-Hardik Pandya
ಮುಂಬೈ: ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದೆ.

ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಬಯಲಾಗಿದೆ. ತಂಡದಲ್ಲಿ ಈಗ ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯ ಎಂದು ಎರಡು ಬಣಗಳಾಗಿವೆ ಎನ್ನಲಾಗಿದೆ. ಇದಕ್ಕೆ ತಕ್ಕಂತೆ ಇತ್ತೀಚೆಗೆ ಕೆಕೆಆರ್ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ರೋಹಿತ್ ಶರ್ಮಾ ತಮ್ಮ ತಂಡದ ಬಗ್ಗೆ ಅಸಮಾಧಾನ ತೋಡಿಕೊಳ್ಳುತ್ತಿರುವ ಚ್ಯಾಟ್ ವೈರಲ್ ಆಗಿತ್ತು.

ಇದೀಗ ಮುಂದಿನ ಪಂದ್ಯಕ್ಕೆ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಮತ್ತೊಮ್ಮೆ ಇಬ್ಬರ ನಡುವಿನ ಶೀತಲ ಸಮರ ಸ್ಪೋಟಗೊಂಡಿದೆ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ ಜೊತೆಗೆ ರೋಹಿತ್ ಒಂದು ನೆಟ್ಸ್ ಬಳಿ ಕೂತಿದ್ದರು. ಈ ವೇಳೆ ಅಲ್ಲಿಗೆ ಹಾರ್ದಿಕ್ ಪಾಂಡ್ಯ ಅಭ್ಯಾಸ ಮಾಡಲು ಬರುತ್ತಿದ್ದಂತೇ ಮೂವರೂ ಅಲ್ಲಿಂದ ಜಾಗ ಖಾಲಿ ಮಾಡಿ ಇನ್ನೊಂದು ನೆಟ್ಸ್ ಬಳಿ ಹೋಗಿದ್ದಾರೆ.

ಹಾರ್ದಿಕ್ ಬರುತ್ತಿದ್ದಂತೇ ಮೂವರೂ ಎದ್ದು ಹೋಗಿದ್ದು ಈಗ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಪಿಚ್ ಪರಿಶೀಲನೆ ವೇಳೆಯೂ ಇತ್ತೀಚೆಗೆ ರೋಹಿತ್ ಪ್ರತ್ಯೇಕವಾಗಿ ಸಚಿನ್ ಜೊತೆಗೆ ಪಿಚ್ ಪರಿಶೀಲಿಸಲು ತೆರಳಿದ್ದು ಕಂಡುಬಂದಿತ್ತು. ಆದರೆ ಅಲ್ಲೇ ಇದ್ದರೂ ಹಾರ್ದಿಕ್ ಪಾಂಡ್ಯ ಅತ್ತ ಕಡೆಗೆ ತಿರುಗಿಯೂ ನೋಡಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಲಕ್ನೋ ಮಾಲಿಕನ ಔದಾರ್ಯವೇ ಬೇಡವೆಂದು ಸ್ವಂತ ಖರ್ಚಿನಲ್ಲಿ ಪ್ರಯಾಣಿಸಿದ ಕೆಎಲ್ ರಾಹುಲ್