Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಲಕ್ನೋ ಮಾಲಿಕನ ಔದಾರ್ಯವೇ ಬೇಡವೆಂದು ಸ್ವಂತ ಖರ್ಚಿನಲ್ಲಿ ಪ್ರಯಾಣಿಸಿದ ಕೆಎಲ್ ರಾಹುಲ್

KL Rahul-Sanjeev Goenka

Krishnaveni K

ಲಕ್ನೋ , ಮಂಗಳವಾರ, 14 ಮೇ 2024 (11:54 IST)
ಲಕ್ನೋ: ಮೊನ್ನೆಯಷ್ಟೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ರನ್ನು ಮಾಲಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡ ದೃಶ್ಯ ವೈರಲ್ ಆಗಿತ್ತು.

ಈ ಘಟನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಮಾಲಿಕ ಎಂಬ ಮಾತ್ರಕ್ಕೆ ಆಟಗಾರರ ಮೇಲೆ ಇಷ್ಟೊಂದು ದರ್ಪ ತೋರುವ ಅಗತ್ಯವಿತ್ತೇ? ಒಂದು ವೇಳೆ ಅಸಮಾಧಾನಗಳಿದ್ದರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಪರಿಹರಿಸಬಹುದಿತ್ತು. ಅದು ಬಿಟ್ಟು ತಂಡಕ್ಕೆ ಸಾಕಷ್ಟು ಒಳಿತು ಮಾಡಿರುವ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಲ್ಲಿ ಒಬ್ಬರಾದ ಕೆಎಲ್ ರಾಹುಲ್ ರನ್ನು ಸಾರ್ವಜನಿಕವಾಗಿ ಬೈದು ಅವಮಾನ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಇದೆಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ದೆಹಲಿಯಲ್ಲಿ ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮತ್ತೊಂದು ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಕೆಎಲ್ ರಾಹುಲ್ ಮಾಲಿಕನ ಔದಾರ್ಯವೇ ಬೇಡವೆಂದು ಸ್ವಂತ ಖರ್ಚಿನಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ. ತಂಡದ ಜೊತೆ ಟೀಂ ಬಸ್ ನಲ್ಲಿ ಪ್ರಯಾಣಿಸದ ರಾಹುಲ್ ತಮ್ಮದೇ ಖರ್ಚಿನಲ್ಲಿ ಪ್ರಯಾಣಿಸಿದ್ದು ಅವರ ಬೇಸರ ಎಷ್ಟಿದೆಯೆಂದು ತೋರಿಸಿಕೊಟ್ಟಿದೆ.

ಈ ನಡುವೆ ಕೆಎಲ್ ರಾಹುಲ್ ರನ್ನು ಮುಂದಿನ ಆವೃತ್ತಿಯಿಂದ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಆರ್ ಸಿಬಿ ಫ್ಯಾನ್ಸ್ ನೀವು ನಮ್ಮ ತಂಡಕ್ಕೆ ಬನ್ನಿ ಎಂದು ಕರೆ ಕೊಡುತ್ತಿದ್ದಾರೆ. ಹೀಗಾಗಿ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತೊರೆಯುವುದು ಹೆಚ್ಚು ಕಡಿಮೆ ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಗೆ ಇಂದು ನಿರ್ಣಾಯಕ ಪಂದ್ಯ