Select Your Language

Notifications

webdunia
webdunia
webdunia
webdunia

ಕೇಕ್ ಮೆತ್ತಿಕೊಂಡಿರುವ ಈ ಕ್ರಿಕೆಟಿಗ ಯಾರು ಹೇಳಿ ನೋಡೋಣ

KL Rahul

Krishnaveni K

ಲಕ್ನೋ , ಶುಕ್ರವಾರ, 19 ಏಪ್ರಿಲ್ 2024 (15:58 IST)
Photo Courtesy: Twitter
ಲಕ್ನೋ: ಕ್ರಿಕೆಟಿಗರು ತಮ್ಮ ಸಹ ಕ್ರಿಕೆಟಿಗರ ಬರ್ತ್ ಡೇ ಸೆಲೆಬ್ರೇಷನ್ ಎಷ್ಟು ಜೋರಾಗಿ ಮಾಡುತ್ತಾರೆ ಎಂಬುದಕ್ಕೆ ಈ ಕ್ರಿಕೆಟಿಗನ ಫೋಟೋವೇ ಸಾಕ್ಷಿ. ಮೈ ತುಂಬಾ ಕೇಕ್ ಮೆತ್ತಿಕೊಂಡಿರುವ ಈ ಕ್ರಿಕೆಟಿಗ ಯಾರು ಎಂದು ನೀವು ಗುರುತಿಸಬಹುದಾ?

ಇವರು ಬೇರೆ ಯಾರೂ ಅಲ್ಲ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್. ಕನ್ನಡಿಗ ಕೆಎಲ್ ರಾಹುಲ್ ನಿನ್ನೆಯಷ್ಟೇ 32 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಅವರ ಜನ್ಮದಿನಕ್ಕೆ ಅನೇಕ ಕ್ರಿಕೆಟ್ ಸ್ನೇಹಿತರು, ಕುಟುಂಬಸ್ಥರು, ಸ್ನೇಹಿತರು, ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ನಿನ್ನೆ ಲಕ್ನೋ ಟೀಂ ತಮ್ಮ ನಾಯಕನ ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದೆ. ಕೆಎಲ್ ರಾಹುಲ್ ಸಾಧನೆಗಳನ್ನು ಚಿತ್ರಿಸಿರುವ ಬೃಹತ್ ಕೇಕ್ ತರಿಸಿ ರಾಹುಲ್ ಕೈಯಿಂದಲೇ ಕಟ್ ಮಾಡಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

ಆದರೆ ಕ್ರಿಕೆಟಿಗರು ಕೇಕ್ ಕಟಿಂಗ್ ಮಾಡುವ ವೇಳೆ ಮಾಡುವ ಕೀಟಲೆಗಳು ಗೊತ್ತಲ್ವಾ? ಮೈ ತುಂಬಾ ಬಟ್ಟೆ ಧರಿಸಿ ಬಂದಿದ್ದ ಕೆಎಲ್ ಕೊನೆಗೆ ಮೈ ತುಂಬಾ ಕೇಕ್ ಮೆತ್ತಿಕೊಳ್ಳಬೇಕಾಯಿತು. ಎಲ್ಲರಿಗೂ ಕೇಕ್ ತಿನಿಸಿ ಆದ ಮೇಲೆ ಲಕ್ನೋ ಆಟಗಾರರು ಮೊದಲು ಮುಖಕ್ಕೆ ಕೇಕ್ ಮೆತ್ತಿದ್ದಾರೆ. ಸಹ ಕ್ರಿಕೆಟಿಗರ ಕೀಟಲೆಗೆ ಮೈ ಒಡ್ಡಿ ನಿಂತ ರಾಹುಲ್ ತಮ್ಮ ಶರ್ಟ್ ಕೂಡಾ ಬಿಚ್ಚಿದ್ದಾರೆ. ಹಿಗಾಗಿ ಆಟಗಾರರು ಮೈ ತುಂಬಾ ಕೇಕ್ ಮೆತ್ತಿದ್ದಾರೆ. ಕೊನೆಗೆ ಅವರನ್ನು ನೋಡಿದರೆ ಇವರೇನಾ ರಾಹುಲ್ ಎಂದು ಗುರುತು ಸಿಗದಂತೇ ಕೇಕ್ ನಲ್ಲಿ ಮುಳುಗಿ ಹೋಗಿದ್ದಾರೆ. ಲಕ್ನೋ ಈ ವಿಡಿಯೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಮುಚ್ಕೊಂಡು ಸಹಿ ಹಾಕು ಎಂದಿದ್ದರಂತೆ ವಿರಾಟ್ ಕೊಹ್ಲಿ