Select Your Language

Notifications

webdunia
webdunia
webdunia
webdunia

ಇಷ್ಟೆಲ್ಲಾ ಆದ್ರೂ ಆರ್ ಸಿಬಿಗೆ ಬರದೇ ಲಕ್ನೋದಲ್ಲಿ ಉಳಿದಿರುವ ಕೆಎಲ್ ರಾಹುಲ್ ಗೆ ಸಿಗುವ ವೇತನವೆಷ್ಟು

KL Rahul-Sanjeev Goenka

Krishnaveni K

ಮುಂಬೈ , ಶುಕ್ರವಾರ, 30 ಆಗಸ್ಟ್ 2024 (11:46 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆಎಲ್ ರಾಹುಲ್ ಮುಂದಿನ ಐಪಿಎಲ್ ಸೀಸನ್ ನಲ್ಲಿ ಮೆಗಾ ಹರಾಜಿಗೊಳಪಡದೇ ಲಕ್ನೋದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಇದನ್ನು ಮಾಲಿಕ ಸಂಜೀವ್ ಗೊಯೆಂಕಾ ಕೂಡಾ ಸ್ಪಷ್ಟಪಡಿಸಿದ್ದಾರೆ.

ಕೆಎಲ್ ರಾಹುಲ್ ಈ ಬಾರಿ ಲಕ್ನೋ ಬಿಟ್ಟು ಆರ್ ಸಿಬಿಗೆ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಇದಕ್ಕೆ ಕಳೆದ ಬಾರಿ ರಾಹುಲ್ ಗೆ ಮೈದಾನದಲ್ಲೇ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಮಾಡಿದ ಅವಮಾನ ಕಾರಣ. ಹಾಗಿದ್ದರೂ ರಾಹುಲ್ ಈ ಬಾರಿಯೂ ಲಕ್ನೋದಲ್ಲಿಯೇ ಉಳಿದುಕೊಳ್ಳಲು ಬಯಸಿದ್ದಾರೆ.

ಆದರೆ ಅವರನ್ನು ನಾಯಕತ್ವದಿಂದ ಕಿತ್ತು ಹಾಕುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಯಾಕೆಂದರೆ ರಾಹುಲ್ ನಾಯಕರಾಗಿ ಮುಂದುವರಿಯಲಿದ್ದಾರಾ ಎಂದು ಕೇಳಿದಾಗ ಸಂಜೀವ್ ಗೊಯೆಂಕಾ ಅದನ್ನು ಈಗಲೇ ನಿರ್ಧರಿಸಲು ಸಮಯವಾಗಿಲ್ಲ ಎಂದಿದ್ದಾರೆ. ಹೀಗಾಗಿ ರಾಹುಲ್ ನಾಯಕನಾಗಿಯೇ ಮುಂದುವರಿಯಲಿದ್ದಾರೆ ಎನ್ನುವುದು ಪಕ್ಕಾ ಆಗಿಲ್ಲ.

ಇಷ್ಟೆಲ್ಲಾ ಆದರೂ ರಾಹುಲ್ ಲಕ್ನೋದಲ್ಲಿಯೇ ಉಳಿದುಕೊಳ್ಳಲು ಅವರಿಗೆ ಸಿಗುತ್ತಿರುವ ವೇತನವೇ ಕಾರಣವಿರಬಹುದು. ಸದ್ಯಕ್ಕೆ ರಾಹುಲ್ ಲಕ್ನೋ ತಂಡದಲ್ಲಿ 17 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ರಾಹುಲ್ ಫಾರ್ಮ್ ಕೊಂಚ ಡಲ್ ಆಗಿದೆ. ಹೀಗಾಗಿ ಮುಂದೆ ಅವರು ಹರಾಜಿಗೆ ಬಂದರೂ ಇಷ್ಟು ದುಬಾರಿ ಸಂಭಾವನೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಇದರ ನಡುವೆ ಲಕ್ನೋ ಕಳೆದ ಎರಡು ಸೀಸನ್ ಗಳಲ್ಲಷ್ಟೇ ಐಪಿಎಲ್ ಗೆ ಪ್ರವೇಶಿಸಿತ್ತು. ಒಮ್ಮೆ ಫೈನಲ್ ವರೆಗೂ ಬಂದು ರಾಹುಲ್ ಗೆ ವಿನ್ನರ್ ಆಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿಯೇ ತೀರಬೇಕೆಂಬ ಹಠ ಅವರಲ್ಲಿರಬಹುದು. ಈ ಕಾರಣಕ್ಕೇ ಅವರು ಆರ್ ಸಿಬಿಗೆ ಬರದೇ ಇರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ವಿರಾಟ್ ಕೊಹ್ಲಿಯಾಗಬೇಕು: ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್