ಮುಂಬೈ: ನಾನು ಬ್ಯಾಡ್ಮಿಂಟನ್ ನ ವಿರಾಟ್ ಕೊಹ್ಲಿ ಆಗಬೇಕು ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ದಿಗ್ಗಜ. ಅವರು ಭಾರತೀಯ ಕ್ರಿಕೆಟ್ ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆ ನಾನು ಭಾರತಿಯ ಬ್ಯಾಡ್ಮಿಂಟನ್ ನ ವಿರಾಟ್ ಕೊಹ್ಲಿ ಆಗಬೇಕು ಎಂದು ಲಕ್ಷ್ಯ ಸೇನ್ ಟಿಆರ್ ಎಸ್ ಪಾಡ್ ಕಾಸ್ಟ್ ನಲ್ಲಿ ಮನದಾಳ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೆಮಿಫೈನಲ್ ಗೇರಿ ದಾಖಲೆ ಮಾಡಿದ್ದರು ಲಕ್ಷ್ಯ ಸೇನ್.
ಈ ಪಾಡ್ ಕಾಸ್ಟ್ ನಲ್ಲಿ ಲಕ್ಷ್ಯ ಸೇನ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರತೀ ಬಾರಿಯೂ ಚೀನಾ ಯಾಕೆ ಬ್ಯಾಡ್ಮಿಂಟನ್ ನಲ್ಲಿ ಗೆಲುವು ಸಾಧಿಸುತ್ತದೆ ಎಂಬುದಕ್ಕೂ ಅವರು ಉತ್ತರ ನೀಡಿದ್ದಾರೆ. ನಮ್ಮಲ್ಲಿ ಒಬ್ಬ ಸಿಂಧು, ಒಬ್ಬ ಸೈನಾ ಅಷ್ಟೇ ಇದ್ದಾರೆ. ಆದರೆ ಅವರಲ್ಲಿ 10 ಸಿಂಧು, 10 ಸೈನಾ ಇದ್ದಾರೆ. ಹೀಗಾಗಿ ಅವರು ಎಲ್ಲೇ ಹೋದರೂ ಗೆಲ್ಲುತ್ತಾರೆ ಎಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಲಕ್ಷ್ಯ ಸೇನ್ ಬ್ಯಾಕ್ ಹ್ಯಾಂಡ್ ಶಾಟ್ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಆ ಹೊಡೆತದ ಬಗ್ಗೆ ಪ್ರಧಾನಿ ಮೋದಿ ಹೊಗಳಿದ್ದನ್ನು ಈ ವೇಳೆ ಅವರು ಸ್ಮರಿಸಿದ್ದಾರೆ. ಪ್ರಧಾನಿ ಮೋದಿಯವರು ಭೇಟಿಯಾದಾಗ ನನ್ನ ಆ ಹೊಡೆತದ ಬಗ್ಗೆ ನೆನಪಿಟ್ಟುಕೊಂಡು ಹೇಳಿದ್ದು ಕೇಳಿ ನಿಜಕ್ಕೂ ನನಗೆ ಅಚ್ಚರಿಯಾಯಿತು ಎಂದಿದ್ದಾರೆ.