Select Your Language

Notifications

webdunia
webdunia
webdunia
webdunia

ಶುಬ್ಮನ್ ಗಿಲ್ ಬಗ್ಗೆ ಹೀಗೆಲ್ಲಾ ಹೇಳಿದರಾ ವಿರಾಟ್ ಕೊಹ್ಲಿ, ವೈರಲ್ ವಿಡಿಯೋದಲ್ಲಿ ಏನಿದೆ

Virat Kohli

Krishnaveni K

ಮುಂಬೈ , ಗುರುವಾರ, 29 ಆಗಸ್ಟ್ 2024 (12:30 IST)
ಮುಂಬೈ: ಟೀಂ ಇಂಡಿಯಾ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿರುವ ಶುಬ್ಮನ್ ಗಿಲ್ ಬಗ್ಗೆ ವಿರಾಟ್ ಕೊಹ್ಲಿ ಟೀಕೆ ಮಾಡಿದ್ದಾರೆ ಎಂಬಂತಹ ವಿಡಿಯೋವೊಂದು ವೈರಲ್ ಆಗಿದ್ದು, ಇದು ನಿಜವೇ ಎಂದು ಅಭಿಮಾನಿಗಳು ಸಂಶಯ ಪಡುವಂತಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಡೀಪ್ ಫೇಕ್ ವಿಡಿಯೋ ಹಾವಳಿ ಜೋರಾಗಿದೆ. ಇದೇ ರೀತಿ ಯಾರೋ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಶುಬ್ಮನ್ ಗಿಲ್ ರನ್ನು ಟೀಕಿಸುವಂತಹ ನಕಲಿ ವಿಡಿಯೋವೊಂದನ್ನು ಸೃಷ್ಟಿಸಿ ಯಾರೋ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಸಾಕಷ್ಟು ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ‘ನಾನು ಗಿಲ್ ರನ್ನುಸಾಕಷ್ಟು ಸಮಯದಿಂದ ನೋಡುತ್ತಿದ್ದೇನೆ. ಆತ ಪ್ರತಿಭಾವಂತ ಅದರಲ್ಲಿ ಅನುಮಾನವೇ ಇಲ್ಲ. ಆದರೆ ಪ್ರಾಮಿಸ್ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜನ ಅವರನ್ನು ಮುಂದಿನ ವಿರಾಟ್ ಕೊಹ್ಲಿ ಎನ್ನುತ್ತಾರೆ. ಆದರೆ ವಿರಾಟ್ ಕೊಹ್ಲಿ ಒಬ್ಬರೇ ಇರಲು ಸಾಧ್ಯ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎನ್ನುತ್ತಾರೆ.

ಈ ವಿಡಿಯೋ ನೋಡಿದ ತಕ್ಷಣ ಇದೊಂದು ಫೇಕ್ ವಿಡಿಯೋ ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ. ಯಾಕೆಂದರೆ ಕೊಹ್ಲಿ ಯಾವತ್ತೂ ತಮ್ಮ ಜ್ಯೂನಿಯರ್ ಆಟಗಾರರನ್ನು ಈ ರೀತಿ ಟೀಕೆ ಮಾಡಿದವರಲ್ಲ ಅಥವಾ ತಮ್ಮನ್ನು ತಾವು ಗ್ರೇಟ್ ಎಂದು ಹೊಗಳಿಕೊಂಡವರಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಯಾರೋ ಕೊಹ್ಲಿ ಮಾತನಾಡುವಂತೆ ಇಂತಹದ್ದೊಂದು ನಕಲಿ ವಿಡಿಯೋ ಹರಿಯಬಿಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಭವಿಷ್ಯದ ಬಗ್ಗೆ ಸಂಜೀವ್ ಗೊಯೆಂಕಾ ಮಹತ್ವದ ಹೇಳಿಕೆ