Select Your Language

Notifications

webdunia
webdunia
webdunia
webdunia

IND vs ZIM T20: ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

Shubman gill

Krishnaveni K

ಹರಾರೆ , ಬುಧವಾರ, 10 ಜುಲೈ 2024 (16:24 IST)
Photo Credit: X
ಹರಾರೆ: ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಐದು ಟಿ20 ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಶುಬ್ಮನ್ ಗಿಲ್ ನೇತೃತ್ವದ ಯುವ ಪಡೆ ಸರಣಿಯಲ್ಲಿ 1-1 ರಿಂದ ಸಮಬಲ ಹೊಂದಿದೆ. ಮೊದಲ ಪಂದ್ಯವನ್ನು ಸೋತಿದ್ದ ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅದರಲ್ಲೂ ಅಭಿಷೇಕ್ ಶರ್ಮಾ ಅವರ ಸ್ಪೋಟಕ ಶತಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ ಮೂರನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಭಾರೀ ಬದಲಾವಣೆ ಮಾಡಿಕೊಂಡಿದೆ. ಟಿ20 ವಿಶ್ವಕಪ್ ಮುಗಿಸಿ ಜಿಂಬಾಬ್ವೆ ಸರಣಿಗೆ ತಂಡವನ್ನು ಕೂಡಿಕೊಂಡಿರುವ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಅತ್ತ ಜಿಂಬಾಬ್ವೆ ಕೂಡಾ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಉಳಿದಂತೆ ಭಾರತ ತಂಡ ಇಂತಿದೆ: ಶುಬ್ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ ವಾಡ್, ಶಿವಂ ದುಬೆ, ಸಂಜು ಸ್ಯಾಮ್ಸನ್, (ವಿಕೆಟ್ ಕೀಪರ್), ರಿಂಕು ಸಿಂಗ್,ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್.


Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಕೊಟ್ಟ 125 ಕೋಟಿ ಬಹುಮಾನ ಹಣದಲ್ಲಿ ರಾಹುಲ್ ದ್ರಾವಿಡ್ ತೆಗೆದುಕೊಂಡಿದ್ದೆಷ್ಟು