Select Your Language

Notifications

webdunia
webdunia
webdunia
webdunia

ಗೌತಮ್ ಗಂಭೀರ್ ಕೋಚ್ ಆದರೆ ಕೆಎಲ್ ರಾಹುಲ್ ಗೆ ಅದೃಷ್ಟ ಖುಲಾಯಿಸುತ್ತಾ

Gautam Gambhir-KL Rahul

Krishnaveni K

ಮುಂಬೈ , ಬುಧವಾರ, 10 ಜುಲೈ 2024 (11:42 IST)
Photo Credit: X
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದು ಈಗ ಕೆಎಲ್ ರಾಹುಲ್ ಅಭಿಮಾನಿಗಳ ಮುಖದಲ್ಲಿ ಕೊಂಚ ಸಮಾಧಾನ ಮೂಡಿದೆ. ಟಿ20 ಕ್ರಿಕೆಟ್ ನಿಂದ ಸಂಪೂರ್ಣವಾಗಿ ಸೈಡ್ ಲೈನ್ ಆಗಿದ್ದ ರಾಹುಲ್ ಗೆ ಇನ್ನು ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ವಿಶ್ವಾಸ ಮೂಡಿದೆ.

ಕೆಎಲ್ ರಾಹುಲ್ ಮತ್ತು ಗೌತಮ್ ಗಂಭೀರ್ ಈಗಾಗಲೇ ಐಪಿಎಲ್ ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ರಾಹುಲ್ ಕೋಚ್ ಆಗಿದ್ದರೆ ಗಂಭೀರ್ ಮೆಂಟರ್ ಆಗಿದ್ದರು. ಇವರಿಬ್ಬರು ಎರಡು ಋತುವಿನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ಇದೀಗ ಕೆಎಲ್ ರಾಹುಲ್ ಟೀಂ ಇಂಡಿಯಾದಿಂದ ಕಿರು ಮಾದರಿ ಕ್ರಿಕೆಟ್ ನಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ. ಮುಂದೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ ನಾಯಕರಾಗಲಿದ್ದಾರೆ ಎಂಬ ಮಾತುಗಳಿವೆ. ಈ ಸರಣಿಗೆ ರೋಹಿತ್ ಶರ್ಮಾ ಗೈರಾಗುವ ಸಾಧ್ಯತೆಯಿದೆ. ವಿಶೇಷವೆಂದರೆ ಗಂಭೀರ್ ಗೂ ಟೀಂ ಇಂಡಿಯಾ ಕೋಚ್ ಆಗಿ ಇದು ಮೊದಲ ಸರಣಿಯಾಗಲಿದೆ.

ಹೀಗಾಗಿ ಗಂಭೀರ್ ಗೆ ಮುಖ್ಯ ಕೋಚ್ ಆಗಿ ಮೊದಲ ಸರಣಿಯಲ್ಲೇ ರಾಹುಲ್ ಜೊತೆ ಕೆಲಸ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ರಾಹುಲ್ ಜೊತೆಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ಗಂಭೀರ್ ಮುಂದೆ ಅವರನ್ನೇ ಏಕದಿನ ತಂಡದ ನಾಯಕನಾಗಿ ಮಾಡಲು ಲಾಬಿ ನಡೆಸಬಹುದು ಎಂಬುದು ರಾಹುಲ್ ಅಭಿಮಾನಿಗಳ ವಿಶ್ವಾಸ. ಹೀಗಾಗಿ ಗಂಭೀರ್ ಬಂದರೆ ರಾಹುಲ್ ಗೆ ಲಾಭ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.

Share this Story:

Follow Webdunia kannada

ಮುಂದಿನ ಸುದ್ದಿ

Gautam Gambhir: ಟೀಂ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಈ ಎರಡು ಇನಿಂಗ್ಸ್ ಗಳನ್ನು ಫ್ಯಾನ್ಸ್ ಎಂದೂ ಮರೆಯಲ್ಲ