Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ ಫಾರಿನ್ ಟೂರ್

Rohit Sharma

Krishnaveni K

ಮುಂಬೈ , ಸೋಮವಾರ, 8 ಜುಲೈ 2024 (11:51 IST)
ಮುಂಬೈ: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕುಟುಂಬದ ಜೊತೆ ಮಜವಾಗಿ ಕಾಲ ಕಳೆಯುತ್ತಿದ್ದಾರೆ. ಯಾವೆಲ್ಲಾ ಕ್ರಿಕೆಟಿಗರು ಟೂರ್ ನಲ್ಲಿದ್ದಾರೆ ಎಂಬ ವಿವರ ಇಲ್ಲಿದೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮುಂಬೈನಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ಇದಾದ ಮರುಕ್ಷಣವೇ ವಿರಾಟ್ ಕೊಹ್ಲಿ ಬ್ಯಾಗ್ ಕಟ್ಟಿಕೊಂಡು ಲಂಡನ್ ವಿಮಾನವೇರಿದ್ದರು. ಈಗಾಗಲೇ ಲಂಡನ್ ನಲ್ಲಿರುವ ಅನುಷ್ಕಾ ಶರ್ಮಾ ಮತ್ತು ಮಕ್ಕಳನ್ನು ಕೂಡಿಕೊಳ್ಳಲು ತೆರಳಿದ್ದಾರೆ.

ಇನ್ನು, ರೋಹಿತ್ ಶರ್ಮಾ ಕೂಡಾ ಎರಡು ದಿನ ಭಾರತದಲ್ಲಿದ್ದು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ವಿಶ್ವಕಪ್ ಗಾಗಿ ಕಳೆದ ಒಂದು ತಿಂಗಳು ಕ್ರಿಕೆಟ್ ನಲ್ಲೇ ತೊಡಗಿಸಿಕೊಂಡಿದ್ದ ರೋಹಿತ್ ತಮ್ಮ ಪತ್ನಿ, ಮಗಳ ಜೊತೆ ವಿದೇಶ ಪ್ರಯಾಣ ಬೆಳೆಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಅವರು ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನು, ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಸಮೇತ ಪ್ರವಾಸದಲ್ಲಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಜೊತೆಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸೂರ್ಯಕುಮಾರ್ ದಂಪತಿ ಈಗ ಟೂರ್ ಮಾಡುತ್ತಿದ್ದಾರೆ. ಇನ್ನು, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ರಂತಹ ಕ್ರಿಕೆಟಿಗರು ಅನಿವಾರ್ಯವಾಗಿ ಜಿಂಬಾಬ್ವೆ ಸರಣಿಯಲ್ಲಿ ಪಾಲ್ಗೊಳ್ಳಲು ಪ್ರವಾಸ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲೂ ರೋಹಿತ್ ಶರ್ಮಾ ನಾಯಕರಾಗಿ ಕಮ್ ಬ್ಯಾಕ್ ಮಾಡ್ತಾರಾ