ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಎಂಥಾ ದೋಸ್ತಿಗಳು ಎಂದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ಬಳಿಕ ಮನೆಗೆ ಮರಳಿದ್ದ ಹಾರ್ದಿಕ್ ಪಾಂಡ್ಯ ಜೊತೆ ಇಶಾನ್ ಸಂಭ್ರಮಿಸುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
ವಿಶ್ವಕಪ್ ಗೆಲುವಿನ ಬಳಿಕ ಮನೆಗೆ ಮರಳಿದ ಹಾರ್ದಿಕ್ ಪಾಂಡ್ಯಗಾಗಿ ಮನೆಯವರು ಪಾರ್ಟಿಯೊಂದನ್ನು ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಇಶಾನ್ ಕಿಶನ್ ಕೂಡಾ ಭಾಗಿಯಾಗಿದ್ದಾರೆ. ಇದೀಗ ಟೀಂ ಇಂಡಿಯಾದಿಂದ ದೂರವಿದ್ದರೂ ಐಪಿಎಲ್ ನಲ್ಲಿ ಇಬ್ಬರೂ ಒಂದೇ ತಂಡದ ಪರ ಆಡುತ್ತಾರೆ.
ಪಾರ್ಟಿಗೆ ಬಂದಿದ್ದ ಇಶಾನ್ ಗೆಳೆಯ ಹಾರ್ದಿಕ್ ನನ್ನು ನೋಡುತ್ತಿದ್ದಂತೇ ಮೈಮೇಲೇ ಬಿದ್ದು ಹೊರಳಾಡಿದ್ದಾರೆ. ಕೆಲವು ಹೊತ್ತು ಅಭಿನಂದನೆಗಳು ಗೆಳೆಯ ಎನ್ನುತ್ತಾ ಮುಖದ ತುಂಬಾ ಮುತ್ತಿನ ಮಳೆಗರೆದಿದ್ದಾರೆ. ಇಶಾನ್ ಪ್ರೀತಿಯ ಕಾಟ ತಡೆಯಲಾಗದೇ ಥ್ಯಾಂಕ್ಯೂ ಬ್ರೋ ಎಂದು ಹಾರ್ದಿಕ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.
ಇವರಿಬ್ಬರ ಈ ಗೆಳೆತನದ ವಿಡಿಯೋ ನೋಡಿದ ನೆಟ್ಟಿಗರು ಅಬ್ಬಬ್ಬಾ ಇಬ್ಬರ ನಡುವೆ ಎಂಥಾ ಪ್ರೇಮ ಎಂದಿದ್ದಾರೆ. ಇದು ಇಷ್ಟಕ್ಕೇ ನಿಂತಿಲ್ಲ. ಅಂಬಾನಿ ಮನೆಯ ಸಂಗೀತ್ ಕಾರ್ಯಕ್ರಮಕ್ಕೂ ಹಾರ್ದಿಕ್ ಮತ್ತು ಇಶಾನ್ ಜೊತೆಯಾಗಿಯೇ ತೆರಳಿದ್ದಾರೆ.