Select Your Language

Notifications

webdunia
webdunia
webdunia
webdunia

ಮನೆಯಲ್ಲೂ ಇಲ್ಲ, ಅಂಬಾನಿ ಮನೆ ಮದುವೆಗೂ ಹಾರ್ದಿಕ್ ಪಾಂಡ್ಯ ಏಕಾಂಗಿ

Hardik Pandya

Krishnaveni K

ಮುಂಬೈ , ಶನಿವಾರ, 6 ಜುಲೈ 2024 (12:18 IST)
Photo Credit: Facebook
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಜೊತೆಗಿಲ್ಲ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಇದೀಗ ಟಿ20 ವಿಶ್ವಕಪ್ ಗೆಲುವಿನ ಬಳಿಕ ಮನೆಯಲ್ಲಿ ಸಂಭ್ರಮಾಚರಣೆ ವೇಳೆ ಮತ್ತು ಅಂಬಾನಿ ಮದುವೆ ಪಾರ್ಟಿಯಲ್ಲೂ ಹಾರ್ದಿಕ್ ಏಕಾಂಗಿಯಾಗಿ ಕಾಣಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ತಾಯ್ನಾಡಿಗೆ ಬಂದ ಕ್ರಿಕೆಟಿಗರಿಗೆ ಭರ್ಜರಿ ಸನ್ಮಾನ ಸಿಕ್ಕಿತ್ತು. ಇದಾದ ಬಳಿಕ ಮನೆಗೆ ಹೋದ ಬಳಿಕವೂ ಹಾರ್ದಿಕ್ ಪಾಂಡ್ಯರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ಮನೆಯಲ್ಲಿ ವಿಶೇಷವಾಗಿ ಕೇಕ್ ಕಟ್ ಮಾಡಿ ವಿಶ್ವಕಪ್ ಗೆಲುವನ್ನು ಸಂಭ್ರಮಿಸಲಾಗಿತ್ತು.

ಈ ಕ್ಷಣಗಳನ್ನು ಹಾರ್ದಿಕ್ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಕೇವಲ ತಮ್ಮ ಮಗನ ಜೊತೆಗಿರುವ ಫೋಟೋ ಮಾತ್ರ ಹಾರ್ದಿಕ್ ಪ್ರಕಟಿಸಿದ್ದಾರೆ. ನಾನು ಮಾಡುವುದು ಎಲ್ಲವೂ ನಿನಗಾಗಿ ಎಂದು ಮಗನಿಗೆ ವಿಶೇಷ ಸಾಲುಗಳನ್ನೂ ಬರೆದಿದ್ದಾರೆ. ಹಾರ್ದಿಕ್ ಗೆಲುವಿನ ಪಾರ್ಟಿಯಲ್ಲಿ ನತಾಶಾ ಬಂದಿರಲಿಲ್ಲ ಎನ್ನುವುದು ಖಚಿತವಾಗಿದೆ.

ಇದಾದ ಮರುಕ್ಷಣವೇ ಹಾರ್ದಿಕ್ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಹಾರ್ದಿಕ್, ಸಹೋದರ ಕೃನಾಲ್ ಮತ್ತು ಪತ್ನಿ ಅಂಬಾನಿ ಪುತ್ರ ಅನಂತ್ ಅಂಬಾನಿ ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆಯೂ ಹಾರ್ದಿಕ್ ಏಕಾಂಗಿಯಾಗಿದ್ದಾರೆ. ಈ ಮೂಲಕ ನತಾಶಾರಿಂದ ದೂರವಾಗಿರುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾಗೆ ಸಿಕ್ತು ಗಣೇಶನ ಆಶೀರ್ವಾದ