Select Your Language

Notifications

webdunia
webdunia
webdunia
webdunia

ಜಯ್ ಶಾ ಐಸಿಸಿ ಅಧ್ಯಕ್ಷರಾಗಲು ಇಷ್ಟಪಡದ ಪಾಕಿಸ್ತಾನ ಮಾಡಿದ್ದೇನು

Jay Shah

Krishnaveni K

ದುಬೈ , ಗುರುವಾರ, 29 ಆಗಸ್ಟ್ 2024 (12:48 IST)
Photo Credit: Facebook
ದುಬೈ: ಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ್ ಶಾಗೆ ಪಾಕಿಸ್ತಾನ ಅಡ್ಡಗಾಲು ಹಾಕಲು ಯತ್ನಿಸಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಜಯ್ ಶಾ ಅಧ್ಯಕ್ಷರಾಗದಂತೆ ಪಾಕಿಸ್ತಾನ ಏನು ಮಾಡಿತ್ತು ಇಲ್ಲಿ ನೋಡಿ.

ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹಿರಿಮೆಗೆ ಜಯ್ ಶಾ ಪಾತ್ರರಾಗಿದ್ದರು. ಅವರು ಐಸಿಸಿ ಅಧ್ಯಕ್ಷರಾಗಲು ಐಸಿಸಿಯ ಎಲ್ಲಾ ಸದಸ್ಯರೂ ವೋಟ್ ಮಾಡಬೇಕು. ಅದರಂತೆ ಜಯ್ ಶಾಗೆ ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳ ಬೆಂಬಲವಿತ್ತು.

ಐಸಿಸಿ ಒಟ್ಟು 16 ಸದಸ್ಯರ ಬಲ ಹೊಂದಿದೆ. ಈ ಪೈಕಿ 15 ವೋಟುಗಳು ಜಯ್ ಶಾ ಪರವಾಗಿಯೇ ಬಂದಿತ್ತು. ಐಸಿಸಿ ಪ್ರಮುಖ ಹುದ್ದೆಗೆ ಜಯ್ ಶಾಗೆ ಹೆಚ್ಚಿನ ಮಂಡಳಿಗ ಬೆಂಬಲವಿದ್ದಿದ್ದರಿಂದ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಬಹುತೇಕ ವೋಟುಗಳೂ ಜಯ್ ಶಾ ಪರವಾಗಿಯೇ ಬಂದಿದ್ದವು.

ಆದರೆ ಪಾಕಿಸ್ತಾನ ಮಾತ್ರ ಜಯ್ ಶಾ ವಿರುದ್ಧವಾಗಿ ವೋಟ್ ಹಾಕುವ ಮೂಲಕ ಜಯ್ ಶಾ ಅಧ್ಯಕ್ಷರಾಗುವುದು ತಮಗೆ ಇಷ್ಟವಿಲ್ಲ ಎಂದು ತೋರಿಸಿಕೊಟ್ಟಿದೆ. ಈ ಚುನಾವಣೆಯಲ್ಲಿ ಪಾಕಿಸ್ತಾನ ತಟಸ್ಥವಾಗಿರಲು ತೀರ್ಮಾನಿಸಿತ್ತು. ಜಯ್ ಶಾ ಅಧ್ಯಕ್ಷರಾದರೆ ಎಲ್ಲಿ ತನ್ನ ರಾಷ್ಟ್ರದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಅಡ್ಡಿಯಾಗುತ್ತಾರೋ ಎಂಬ ಆತಂಕ ಪಾಕಿಸ್ತಾನಕ್ಕಿದೆ. ಈ ಕಾರಣಕ್ಕೆ ಅವರು ಅಧ್ಯಕ್ಷರಾಗುವುದು ಆ ದೇಶಕ್ಕೆ ಇಷ್ಟವಿಲ್ಲ. ಹಾಗಿದ್ದರೂ 16 ರ ಪೈಕಿ 15 ಮತಗಳು ಬಂದಿದ್ದರಿಂದ ಜಯ್ ಶಾ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಶುಬ್ಮನ್ ಗಿಲ್ ಬಗ್ಗೆ ಹೀಗೆಲ್ಲಾ ಹೇಳಿದರಾ ವಿರಾಟ್ ಕೊಹ್ಲಿ, ವೈರಲ್ ವಿಡಿಯೋದಲ್ಲಿ ಏನಿದೆ