Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ವಿರುದ್ಧ ಗೆದ್ದಿದ್ದಕ್ಕೆ ಟೀಂ ಇಂಡಿಯಾಗೆ ಟಾಂಗ್ ಕೊಡುತ್ತಿರುವ ಬಾಂಗ್ಲಾದೇಶ

Bangladesh Captain

Krishnaveni K

ಢಾಕಾ , ಗುರುವಾರ, 5 ಸೆಪ್ಟಂಬರ್ 2024 (09:47 IST)
Photo Credit: X
ಢಾಕಾ: ಮೊನ್ನೆಯಷ್ಟೇ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ ತಂಡ ಈಗ ವಿಶ್ವಕಪ್ ಗೆದ್ದ ರೇಂಜ್ ಗೆ ಸಂಭ್ರಮಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಗೆದ್ದ ಹುಮ್ಮಸ್ಸಿನಲ್ಲಿ ಟೀಂ ಇಂಡಿಯಾಕ್ಕೇ ವಾರ್ನಿಂಗ್ ಕೊಡುತ್ತಿದೆ.

ಪಾಕಿಸ್ತಾನ ವಿರುದ್ಧ ಗೆದ್ದ ಟ್ರೋಫಿಯೊಂದಿಗೆ ಮಲಗಿ ನಿದ್ರಿಸುವ ಫೋಟೋವನ್ನು ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಪ್ರಕಟಿಸಿದ್ದಾರೆ. ಈ ಮೂಲಕ ಮುಂದಿನ ಸರಣಿ ಆಡಲಿರುವ ಟೀಂ ಇಂಡಿಯಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಇದಕ್ಕೆ ಭಾರತೀಯ ಫ್ಯಾನ್ಸ್ ತೀವ್ರವಾಗಿ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ವಿರುದ್ಧ ಟೆಸ್ಟ್ ಗೆದ್ದ ಬಾಂಗ್ಲಾದೇಶದ್ದು ಐತಿಹಾಸಿಕ ಸಾಧನೆಯೇ ಸರಿ. ಆದರೆ ಒಡೆದ ಮನೆಯಂತಾಗಿರುವ ಪಾಕಿಸ್ತಾನ ತಂಡದ ವಿರುದ್ಧ ಗೆದ್ದಷ್ಟು ಸುಲಭವಲ್ಲ ಟೀಂ ಇಂಡಿಯಾ ವಿರುದ್ಧ ಗೆಲ್ಲುವುದು. ಟೀಂ ಇಂಡಿಯಾ ಬಳಿ ನಿಮ್ಮ ಈ ಆಟಗಗಳೆಲ್ಲಾ ನಡೆಯಲ್ಲ ಎಂದು ಫ್ಯಾನ್ಸ್ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆದ್ದ ಬಳಿಕ ಇಂತಹದ್ದೊಂದು ಫೋಟೋ ಹಾಕಿ ಸಂಭ್ರಮಿಸಿದ್ದರು. ಇದೀಗ ಬಾಂಗ್ಲಾ ನಾಯಕ ಅಂತಹದ್ದೇ ಫೋಟೋ ಹಾಕಿ ಟೀಂ ಇಂಡಿಯಾ ಕೆಣಕಿದ್ದಾರೆ ಎನ್ನಬಹುದು. ಪಾಕಿಸ್ತಾನದ ವಿರುದ್ಧ ಸರಣಿ ಗೆದ್ದಿದ್ದಕ್ಕೇ ವಿಶ್ವಕಪ್ ಗೆದ್ದ ರೇಂಜ್ ಗೆ ಸಂಭ್ರಮಿಸಬೇಡಿ ಎಂದು ಫ್ಯಾನ್ಸ್ ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಲಕ್ ಇಲ್ಲ, ಈ ತಂಡಕ್ಕೆ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ