Select Your Language

Notifications

webdunia
webdunia
webdunia
webdunia

ಲಾಂಗ್ ಬ್ರೇಕ್ ಬೇಕು ಎಂದಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಲಂಕಾ ಸರಣಿಗೆ ವಾಪಸ್ ಆಗಿದ್ದು ಹೇಗೆ

Rohit Sharma-Virat Kohli

Krishnaveni K

ಮುಂಬೈ , ಶನಿವಾರ, 20 ಜುಲೈ 2024 (09:17 IST)
ಮುಂಬೈ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಸುದೀರ್ಘ ಬ್ರೇಕ್ ಬೇಕು ಎಂದಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್ ಕೊಹ್ಲಿ ದಿಡೀರ್ ಆಗಿ ತಂಡಕ್ಕೆ ವಾಪಸ್ ಆಗಿದ್ದು ಹೇಗೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದಕ್ಕೆ ಕಾರಣ ಗೌತಮ್ ಗಂಭೀರ್ ಮಾಡಿದ ಮನವಿ ಎನ್ನಲಾಗುತ್ತಿದೆ. ಟೀಂ ಇಂಡಿಯಾ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗಂಭೀರ್ ತಮ್ಮ ಮೊದಲ ಸರಣಿಯಲ್ಲೇ ಹಿರಿಯ ಆಟಗಾರರೂ ಉಪಸ್ಥಿತರಿರಬೇಕೆಂದು ಬಯಸಿದ್ದರು. ಇದಕ್ಕಾಗಿ ಸ್ವತಃ ತಾವೇ ಕೊಹ್ಲಿ ಮತ್ತು ರೋಹಿತ್ ಗೆ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದರು.

ಇದಲ್ಲದೆ, ಮುಂದಿನ ವರ್ಷ ಆರಂಭದಲ್ಲೇ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಈ ಟೂರ್ನಿಗೆ ಮೊದಲು ಟೀಂ ಇಂಡಿಯಾಕ್ಕೆ ಕೆಲವೇ ಕೆಲವು ಏಕದಿನ ಪಂದ್ಯಗಳು ಸಿಗುತ್ತಿವೆ. ತಂಡದ ಕಾಂಬಿನೇಷನ್ ಬಗ್ಗೆ ಯೋಜನೆ ರೂಪಿಸಲು ಈ ಹಿರಿಯ ಆಟಗಾರರು ತಂಡದಲ್ಲಿದ್ದರೆ ಸುಲಭವಾಗುತ್ತದೆ ಮತ್ತು ಹಿರಿಯ ಆಟಗಾರರಿಗೂ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಅಭ್ಯಾಸ ದೊರೆತಂತಾಗುತ್ತದೆ ಎಂದು ಗಂಭೀರ್ ಮನವಿ ಮಾಡಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ಸುದೀರ್ಘ ಬ್ರೇಕ್ ಪಡೆಯಲು ಬಯಸಿದ್ದ ರೋಹಿತ್ ಮತ್ತು ಕೊಹ್ಲಿಯನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಲಾಯಿತು. ಹೀಗಾಗಿ ಈಗ ವಿದೇಶ ಪ್ರವಾಸದಲ್ಲಿರುವ ಎಲ್ಲಾ ಆಟಗಾರರೂ ಏಕದಿನ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಮಹಿಳಾ ಕ್ರಿಕೆಟ್: ಭಾರತ ವಿರುದ್ಧ ಟಾಸ್‌ ಗೆದ್ದ ಪಾಕ್‌