Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ವರ್ತನೆ ಸರಿ ಇಲ್ಲ, ರೋಹಿತ್ ಶರ್ಮಾ ಹಾಗಲ್ಲ: ವೈರಲ್ ಆಯ್ತು ಅಮಿತ್ ಮಿಶ್ರಾ ಹೇಳಿಕೆ

Rohit Sharma-Virat Kohli

Krishnaveni K

ಮುಂಬೈ , ಮಂಗಳವಾರ, 16 ಜುಲೈ 2024 (11:18 IST)
Photo Credit: X
ಮುಂಬೈ: ಟೀಂ ಇಂಡಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವರ್ತನೆ ಬಗ್ಗೆ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ನೀಡಿರುವ ಹೇಳಿಕೆಯೊಂದು ಈಗ ಸಂಚಲನ ಸೃಷ್ಟಿಸಿದೆ.

ಸಂದರ್ಶನವೊಂದರಲ್ಲಿ ಅಮಿತ್ ಮಿಶ್ರಾ ಇಬ್ಬರ ಇತ್ತೀಚೆಗಿನ ನಡತೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ವರ್ತನೆ ಬದಲಾಗಿದೆ ಎಂದಿರುವ ಅಮಿತ್, ಆದರೆ ರೋಹಿತ್ ಮಾತ್ರ ಸ್ವಲ್ಪವೂ ಬದಲಾಗಿಲ್ಲ, ಮೊದಲಿನಂತೆಯೇ ಇದ್ದಾರೆ ಎಂದು ಹೊಗಳಿದ್ದಾರೆ.

ಮೊದಲೇ ಈ ಇಬ್ಬರೂ ದಿಗ್ಗಜ ಕ್ರಿಕೆಟಿಗರ ಅಭಿಮಾನಿಗಳ ನಡುವೆ ಯಾವತ್ತೂ ಕಿತ್ತಾಟವಾಗುತ್ತಲೇ ಇರುತ್ತದೆ. ಅಮಿತ್ ಮಿಶ್ರಾ ಇಂತಹದ್ದೊಂದು ಹೇಳಿಕೆ ನೀಡಿದ ಮೇಲೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲವೇ ಎದ್ದಿದೆ. ಕೊಹ್ಲಿ ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಂಡರೆ ರೋಹಿತ್ ಅಭಿಮಾನಿಗಳು ಕೊಹ್ಲಿ ಬಗ್ಗೆ ಟೀಕಿಸಿದ್ದಾರೆ.

ರೋಹಿತ್ ಶರ್ಮಾಗೆ ಆಪ್ತರಾಗಿರುವ ಅಮಿತ್ ಮಿಶ್ರಾ ಸಂದರ್ಶನದಲ್ಲಿ ‘ವಿರಾಟ್ ಅಧಿಕಾರ ಮತ್ತು ಖ್ಯಾತಿ ಬಂದ ಮೇಲೆ ಮೊದಲಿನಂತಿಲ್ಲ. ಅವರ ವರ್ತನೆ ಬದಲಾಯಿತು. ನಿಜ ಹೇಳಬೇಕೆಂದರೆ ಕೊಹ್ಲಿ ಮೊದಲಿನಂತೆ ಎಲ್ಲರ ಜೊತೆ ಅದೇ ವರ್ತನೆ ಹೊಂದಿಲ್ಲ. ಆದರೆ ರೋಹಿತ್ ಮೊದಲ ದಿನದಿಂದಲೂ ಹೇಗಿದ್ದಾರೋ ಈಗಲೂ ಹಾಗೆಯೇ ಇದ್ದಾರೆ. ಅವರ ಜೊತೆಗೆ ಈಗಲೂ ತಮಾಷೆ ಮಾಡುತ್ತಾ ಗೆಳೆಯನಂತೆ ಕಾಲ ಕಳೆಯಬಹುದು’ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ ಮದುವೆಗೆ ಇಲ್ಲಿ ಬರದಿದ್ದರೇನು, ಅಲ್ಲಿ ಹಾಜರಿರಲಿದ್ದಾರೆ ವಿರಾಟ್ ಕೊಹ್ಲಿ ದಂಪತಿ