Publish Date: Sat, 13 Jul 2024 (09:57 IST)
Updated Date: Sat, 13 Jul 2024 (10:01 IST)
ಮುಂಬೈ: ಅಂಬಾನಿ ಕುಟುಂಬದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮುಂಬೈನ ಜಿಯೋ ಸೆಂಟರ್ ನಲ್ಲಿ ಅದ್ಧೂರಿಯಾಗಿ ನಡಯುತ್ತಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತ್ರ ಮದುವೆಯಿಂದ ದೂರವುಳಿದಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅವರನ್ನು ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಮರಳಿ ಕರೆತರಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ನಡುವೆ ರೋಹಿತ್ ಮಾತ್ರ ಯಾವುದರ ಗುಟ್ಟು ಬಿಟ್ಟುಕೊಟ್ಟಿಲ್ಲ.
ನಿನ್ನೆಯಿಂದ ಮುಂಬೈ ಇಂಡಿಯನ್ಸ್ ಮಾಲಿಕ ಅಂಬಾನಿ ಮನೆ ಮದುವೆ ಅದ್ಧೂರಿಯಾಗಿ ನಡೆಯುತ್ತಿದ್ದು, ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಆದರೆ ರೋಹಿತ್ ಶರ್ಮಾ ಈ ಮದುವೆಯಿಂದ ದೂರವುಳಿದಿದ್ದಾರೆ.
ರೋಹಿತ್ ಶರ್ಮಾ ಪತ್ನಿ, ಮಗಳ ಸಮೇತ ಇತ್ತೀಚೆಗೆ ಲಂಡನ್ ಗೆ ತೆರಳಿದ್ದರು. ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ನಿಂದ ಬ್ರೇಕ್ ಪಡೆದಿರುವ ರೋಹಿತ್ ಸದ್ಯಕ್ಕೆ ಲಂಡನ್ ನಲ್ಲಿ ವಿಂಬಲ್ಡನ್ ಮ್ಯಾಚ್ ನೋಡುತ್ತಾ ಮಜವಾಗಿ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಮೊದಲು ಅಂಬಾನಿ ಮನೆಯ ಸಂಗೀತ್ ಕಾರ್ಯಕ್ರಮದಲ್ಲಿ ಮಾತ್ರ ರೋಹಿತ್ ಭಾಗಿಯಾಗಿದ್ದರು. ಅದಾದ ಬಳಿಕ ಮದುವೆಯಲ್ಲಿಅವರು ಭಾಗಿಯಾಗಿಲ್ಲ.