Select Your Language

Notifications

webdunia
webdunia
webdunia
webdunia

ಮುಂಬೈಗೆ ಹಾಗೆ ಬಂದು ಹೀಗೇ ಹೋದ ವಿರಾಟ್ ಕೊಹ್ಲಿ ವಿಮಾನವೇರಿದ್ದು ಎಲ್ಲಿಗೆ

Virat Kohli

Krishnaveni K

ಮುಂಬೈ , ಶುಕ್ರವಾರ, 5 ಜುಲೈ 2024 (16:37 IST)
ಮುಂಬೈ: ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ ವೇಳೆ ಮುಂಬೈಗೆ ಬಂದಿದ್ದು ವಿರಾಟ್ ಕೊಹ್ಲಿ ಇದರ ಬೆನ್ನಲ್ಲೇ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರು ಎಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲೂ ಇದೆ.

ಸದ್ಯಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸಮಯ. ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ವಿರಾಟ್ ಕೊಹ್ಲಿ ಈಗ ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ನಿನ್ನೆಯಷ್ಟೇ ಟೀಂ ಇಂಡಿಯಾ ಜೊತೆ ಇಡೀ ದಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಕೊಹ್ಲಿ ಇದೀಗ ಲಂಡನ್ ವಿಮಾನವೇರಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದು ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಟಿ20 ವಿಶ್ವಕಪ್ ಆರಂಭದಲ್ಲಿ ಅನುಷ್ಕಾ ಶರ್ಮಾ ಮತ್ತು ಮಕ್ಕಳು ಕೊಹ್ಲಿ ಜೊತೆ ಅಮೆರಿಕಾದಲ್ಲಿದ್ದರು. ಅದಾದ ಬಳಿಕ ಅನುಷ್ಕಾ ತಮ್ಮ ಮಕ್ಕಳ ಜೊತೆ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

ಇದೀಗ ಕೊಹ್ಲಿ ಕೂಡಾ ಅನುಷ್ಕಾ ಮತ್ತು ಮಕ್ಕಳ ಜೊತೆಯಾಗಲು ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ. ಪಪ್ಪಾರಾಜಿಯೊಬ್ಬರು ಕೊಹ್ಲಿ ಲಂಡನ್ ಗೆ ಪ್ರಯಾಣ ಬೆಳೆಸುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

'ಹೋಮ್‌ ಸ್ವೀಟ್ ಹೋಮ್‌'ನಲ್ಲಿ ರೋಹಿತ್ ಶರ್ಮಾಗೆ ಕಾದಿತ್ತು ಸರ್ಪ್ರೈಸ್