Select Your Language

Notifications

webdunia
webdunia
webdunia
webdunia

ವಿಶ್ವಕಪ್ ತಂದುಕೊಟ್ಟ ವೀರರಿಗೆ ಮುಂಬೈನಲ್ಲಿ ವಿಜಯದ ಯಾತ್ರೆ ಶುರು

ವಿಶ್ವಕಪ್ ತಂದುಕೊಟ್ಟ ವೀರರಿಗೆ ಮುಂಬೈನಲ್ಲಿ ವಿಜಯದ ಯಾತ್ರೆ ಶುರು

Sampriya

ಮುಂಬೈ , ಗುರುವಾರ, 4 ಜುಲೈ 2024 (20:32 IST)
Photo Courtesy X
ಮುಂಬೈ: 11 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ಟೀಂ ಇಂಡಿಯಾ ಆಟಗಾರರಿಗೆ ಮುಂಬೈನಲ್ಲಿ ಇಂದು ವಿಜಯೋತ್ಸವದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ವಾಂಖೆಡೆ ಕ್ರೀಡಾಂಗಣದ ಬಳಿ ಅಭಿಮಾನಿಗಳು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ಇಂದು ಬೆಳಿಗ್ಗೆ ತಾಯ್ನಾಡಿಗೆ ಆಗಮಿಸಿದ ಟೀಂ ಇಂಡಿಯಾ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ  ಪ್ರಧಾನಿ ನಿವಾಸದಲ್ಲಿ ಮೋದಿ ಜತೆ ಟೀಂ ಇಂಡಿಯಾ ಆಟಗಾರರು ಕೆಲಕಾಲ ಸಮಯ ಕಳೆದರು. ಸಂಜೆ ಮುಂಬೈ ಕಡೆ ಪ್ರಯಾಣ ಬೆಳೆಸಿದ ಆಟಗಾರರಿಗೆ ಭವ್ಯವಾದ ಸ್ವಾಗತ ಕೋರಲಾಯಿತು.

ನರಿಮನ್ ಪಾಯಿಂಟ್‌ನಿಂದ ಪ್ರಾರಂಭವಾಗುವ ವಿಜಯೋತ್ಸವ ಮೆರವಣಿಗೆ ಮೆರೈನ್ ಡ್ರೈವ್ ಮೂಲಕ ವಾಂಖೆಡೆ ಕ್ರೀಂಡಾಗಣಕ್ಕೆ ತಲುಪಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಲಿದೆ. ಇನ್ನೂ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮುಂಬೈ ಗಲ್ಲಿಗಲ್ಲಿಗಳಲ್ಲಿ ಜನ ಸೇರಿದ್ದು, ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಕೂಗಿ ಸಂಭ್ರಮಿಸಿದರು.

ಬಾರ್ಬಡೋಸಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಭಾರತ ತಂಡ 11 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿತು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಭೇಟಿಗೆ ಖುಷ್ ಆದ ವಿರಾಟ್ ಕೊಹ್ಲಿ