Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭೇಟಿಗೆ ಖುಷ್ ಆದ ವಿರಾಟ್ ಕೊಹ್ಲಿ

T20 World Cup
Photo Courtesy X
ನವದೆಹಲಿ:  ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಕೊಹ್ಲಿ ತಮ್ಮ ಸಂತೋಷವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದರು.

ಇಂದು ತಾಯ್ನಾಡಿಗೆ  ಐಸಿಸಿ ಟಿ20 ವಿಶ್ವಕಪ್ ಜತೆಗೆ ಆಗಮಿಸಿದ ಟೀಂ ಇಂಡಿಯಾವನ್ನು ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಅಭಿನಂದಿಸಿದರು. ವಿಶ್ವಕಪ್‌ ಜತೆಗೆ ಮೋದಿ ಜತೆ ಟೀಂ ಇಂಡಿಯಾ ಫೋಟೋಗೆ ಪೋಸ್ ನೀಡಿತು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅದಲ್ಲದೆ ಮೋದಿ ಅವರು ಟೀಂ ಇಂಡಿಯಾದ ಜತೆ ಉಪಹಾರವನ್ನು ಸವಿದು, ಅವರ ಜತೆ ಮಾತುಕತೆ ನಡೆಸಿದರು.

ಈ ಖುಷಿಯ ಕ್ಷಣವನ್ನು ವಿರಾಟ್ ಕೊಹ್ಲಿ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದರು.

"ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ಗೌರವಾನ್ವಿತವಾಗಿತ್ತು. ನಮ್ಮನ್ನು ಪ್ರಧಾನಿ ನಿವಾಸಕ್ಕೆ ಅಹ್ವಾನಿಸಿದಕ್ಕೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಅವರಿಗೆ ಕೃತಜ್ಞನೆ ಸಲ್ಲಿಸಿದ್ದಾರೆ.  

ಸಭೆಯ ನಂತರ, ವಿಜಯಶಾಲಿ ಕ್ರಿಕೆಟಿಗರು ಮುಂಬೈಗೆ ವಿಮಾನದಲ್ಲಿ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದರು, ಅಲ್ಲಿ ಮೆರೈನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ ಭವ್ಯ ವಿಜಯೋತ್ಸವ ಮೆರವಣಿಗೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ಹೀಗೊಂದು ವಿಶೇಷ ಪ್ರಶ್ನೆ ಹಾಕಿದ ಪ್ರಧಾನಿ ನರೇಂದ್ರ ಮೋದಿ