Select Your Language

Notifications

webdunia
webdunia
webdunia
webdunia

ಇನ್ನೂ 20 ವರ್ಷ ನಾವೇ ಅಧಿಕಾರದಲ್ಲಿರುವುದು, ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಇನ್ನೂ 20 ವರ್ಷ ನಾವೇ ಅಧಿಕಾರದಲ್ಲಿರುವುದು, ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

Sampriya

ನವದೆಹಲಿ , ಬುಧವಾರ, 3 ಜುಲೈ 2024 (14:51 IST)
ನವದೆಹಲಿ: ದೇಶದಲ್ಲಿ 60 ವರ್ಷಗಳ ನಂತರ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರ ಮೂರನೇ ಅವಧಿಗೆ ಮತ್ತೇ ಅಧಿಕಾರಕ್ಕೆ ಬಂದಿರುವುದು. ಈಗಾಗಲೇ 10 ವರ್ಷಗಳನ್ನು ಪೂರೈಸಿರುವ ನಮ್ಮ ಸರ್ಕಾರ ಇನ್ನೂ 20 ವರ್ಷ ಪೂರೈಸಲಿದೆ ಎಂದು ರಾಜ್ಯಸಭೆಯಲ್ಲೂ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.  

ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿ ರಾಜ್ಯಸಭೆಯಲ್ಲೂ ವಿಪಕ್ಷಗಳ ವಿರುದ್ಧ ಗುಡುಗಿದರು.

ಇಂದು ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಿರುವವರು ಅಂದು  ನವೆಂಬರ್ 24 ರಂದು  ಸಂವಿಧಾನ ದಿನ ಆಚರಿಸಲು ನಿರ್ಧರಿಸಿದಾಗ ಅದನ್ನು ವಿರೋಧಿಸಿದರು ಎಂದು ತಿರುಗೇಟು ನೀಡಿದರು.

ನಾವು ಕಳೆದ 10 ವರ್ಷಗಳಲ್ಲಿ ಮಾಡಿದ ಸಮರ್ಪಣಾ ಮನೋಭಾವ ಸೇವೆಯನ್ನು ಗುರುತಿಸಿ ಮತದಾರರು ನಮಗೆ ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ನಾಡಿನ ಜನತೆ ಮತ್ತೇ ನಮಗೆ ಆಶೀರ್ವಾದ ಮಾಡಿದೆ. ದೇಶದ ಜನತೆ ಅಪಪ್ರಚಾರವನ್ನು ಸೋಲಿಸಿದ್ದಾರೆ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ವಿಶ್ವಾಸ ರಾಜಕಾರಣಕ್ಕೆ ಗೆಲುವಿನ ಮುದ್ರೆ ಹಾಕಲಾಗಿದೆ. ಇನ್ನೂ 20 ವರ್ಷ ನಮ್ಮ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ವಿರೋಧ ಪಕ್ಷಗಳು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿ,. ರಾಜ್ಯಸಭೆಯನ್ನು ಮುಂದೂಡಿ, ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿ ರಾಜ್ಯಸಭೆಯಿಂದ ಹೊರನಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ತೆಪ್ಪ ಮುಳುಗಿ ಮೂವರು ದುರ್ಮರಣ