Select Your Language

Notifications

webdunia
webdunia
webdunia
webdunia

ನೋಡ ನೋಡುತ್ತಿದ್ದಂತೆ ಇಡೀ ಕುಟುಂಬವೇ ನೀರು ಪಾಲಾಯ್ತು

Mumbai WaterFall

Sampriya

ಮುಂಬೈ , ಸೋಮವಾರ, 1 ಜುಲೈ 2024 (16:09 IST)
Photo Courtesy X
ಮುಂಬೈ: ಇಲ್ಲಿನ ಸಮೀಪದ ಲೋನಾವಾಲಾದಲ್ಲಿ ಭೋರ್ಗರೆಯುತ್ತಿರುವ ಜಲಪಾತಕ್ಕಿಳಿದ ಒಂದೇ ಕುಟುಂಬದ ಏಳು ಮಂದಿ ಕೊಚ್ಚಿಹೋದ ಘಟನೆ ಭಾನುವಾರ ನಡೆದಿದೆ.

ಇನ್ನೂ ಜಲಪಾತದ ಮಧ್ಯಕ್ಕೆ ಹೋದ ಕುಟುಂಬ ನೆರವಿಗಾಗಿ ಸಹ ಪ್ರವಾಸಿಗರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಏಕಾಏಕಿ ನೀರಿನ ರಭಸ ಜಾಸ್ತಿಯಾಗಿದ್ದರಿಂದ ನಿಯಂತ್ರಣ ಕಳೆದುಕೊಂಡು ಕೊಚ್ಚಿಹೋಗಿದ್ದಾರೆ. ಇನ್ನೂ ಈ ದೃಶ್ಯವನ್ನೇ ಅಲ್ಲೇ ಇದ್ದ ಪ್ರವಾಸಿಗರೊಬ್ಬರು ವಿಡಿಯೋ ಮಾಡಿದ್ದು, ಸದ್ಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಂಬೈನಿಂದ ಕೇವಲ 80 ಕಿ.ಮೀ ದೂರದಲ್ಲಿರುವ ಗಿರಿಧಾಮದಲ್ಲಿ ಏಳು ಮಂದಿಯ ಕುಟುಂಬ ವಿಹಾರಕ್ಕೆ ಬಂದಿತ್ತು.  ಮಳೆಗಾಲದಲ್ಲಿ ನೂರಾರು ಪ್ರವಾಸಿಗರು ಈ ಜಾಲಪಾತಕ್ಕೆ ಆಗಮಿಸುವಂತೆ, ಈ ಕುಟುಂಬವು ಬಂದು ಎಂಜಾಯ್ ಮಾಡುತ್ತಿದ್ದರು. ಇನ್ನೂ ಜಲಪಾತದ ಮಧ್ಯೆ ಹೋಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಒಂದೇ ಕುಟುಂಬದ 7 ಮಂದಿ ಒಬ್ಬರನೊಬ್ಬರು ಹಿಡಿದುಕೊಂಡು ಬಂಡೆಯ ಮೇಲೆ ನಿಂತಿದ್ದಾರೆ. ಮಳೆ ಜಾಸ್ತಿಯಾಗಿದ್ದರಿಂದ ಏಕಾಏಕಿ ನೀರಿನ ರಭಸವೂ ಜಾಸ್ತಿಯಾಗುತ್ತಾ ಹೋಗಿದೆ. ಈ ವೇಳೆ ಸಂತ್ರಸ್ತರು ನೆರವಿಗಾಗಿ ಕೂಗಾಡಿದ್ದಾರೆ. ಈ ವಿಡಿಯೋ ನೋಡಿದಾಗ ಮೈ ಝುಮ್ಮೆನಿಸುತ್ತದೆ.

ಇನ್ನೂ ಸಂತ್ರಸ್ತರ ನೆರವಿಗೆ ಇತರ ಪ್ರವಾಸಿಗರು ಜಮಾಯಿಸಿದರು ‌ ರಭಸವಾಗಿ ಹರಿಯುವ ನೀರು ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ನಾವು ಜನರ ಧ್ವನಿಯಾಗಿದ್ದೇವೆ, ಆದರೆ ಮೋದಿ ಕೇವಲ ಮನ್ ಕೀ ಬಾತ್ ಮಾಡ್ತಾರೆ: ಮಲ್ಲಿಕಾರ್ಜುನ ಖರ್ಗೆ