Daily Horoscope

Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ: ವಿಶ್ವದ ಶ್ರೀಮಂತ ಮದುವೆ ಇಂದಿನಿಂದ ಶುರು

Anant Ambani-Radhika Merchant
ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಿದ್ದು, ಮೂರು ದಿನ ಮದುವೆ ಕಾರ್ಯಕ್ರಮ ನಡೆಯಲಿದೆ.

ಜುಲೈ 12 ರಿಂದ ಜುಲೈ 15 ರವರೆಗೆ ಮುಂಬೈನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಅಂಬಾನಿ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್ ನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಸಾಕಷ್ಟು ಗಣ್ಯಾತಿಗಣ್ಯರು ಮದುವೆಗೆ ಆಗಮಿಸಲಿದ್ದಾರೆ. ಈಗಾಗಲೇ ವಿಐಪಿಗಳು ಮುಂಬೈಗೆ ಬಂದು ಸೇರಿದ್ದಾರೆ.

ಈ ಮದುವೆಗೆ ಅಂಬಾನಿ ಕುಟುಂಬ ಸುಮಾರು 5000 ಕೋಟಿ ರೂ ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಆ ಮೂಲಕ ವಿಶ್ವದ ಶ್ರೀಮಂತ ಮುದುವೆಯ ಕಾರ್ಯಕ್ರಮ ಎಂಬ ಖ್ಯಾತಿಗೊಳಗಾಗುತ್ತಿದೆ. ಮಾರ್ಚ್ ನಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ವಿಶ್ವವಿಖ್ಯಾತಿ ಸೆಲೆಬ್ರಿಟಿಗಳಿಂದ ಕಾರ್ಯಕ್ರಮಗಳು ನಡೆದಿದ್ದವು.

ದೇಶ ವಿದೇಶದಿಂದ ಮದುವೆಗಾಗಿ ಆಗಮಿಸುವ ಗಣ್ಯರಿಗಾಗಿ 100 ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ. 100 ಕ್ಕೂ ಹೆಚ್ಚು ಭಕ್ಷ್ಯ ಭೋಜನ ತಯಾರಿಸಲಾಗಿದೆ. ಇದಕ್ಕಾಗಿ ಖ್ಯಾತ ಆಹಾರೋದ್ಯಮಿಗಳನ್ನು ನಿಗದಿಪಡಿಸಲಾಗಿದೆ. ರಾಜಕೀಯ, ಸಿನಿಮಾ, ಉದ್ಯಮ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರು ಮದುವೆಗೆ ಹಾಜರಿ ಹಾಕಲಿದ್ದಾರೆ. ಒಟ್ಟಿನಲ್ಲಿ ಮುಂಬೈನ ಜಿಯೋ ಸೆಂಟರ್ ನಲ್ಲಿ ಇಂದ್ರನ ವೈಭೋಗವೇ ಧರೆಗಿಳಿದು ಬಂದಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟಿಸುತ್ತಾರೆಂದು ಭಯಕ್ಕೆ ಪೊಲೀಸರಿಂದ ಮನೆಗೆ ಮುತ್ತಿಗೆ ಹಾಕಿಸಿದ್ದಾರೆ: ಬಿಜೆಪಿ ಆರೋಪ