Select Your Language

Notifications

webdunia
webdunia
webdunia
webdunia

ಒಂದು ಕ್ಷಣವೂ ಮುಂಬೈನಲ್ಲಿ ನಿಲ್ಲದ ವಿರಾಟ್ ಕೊಹ್ಲಿ ಇನ್ನು ಶಾಶ್ವತವಾಗಿ ಲಂಡನ್ ನಿವಾಸಿಯಾಗ್ತಾರಾ

Virat Kohli

Krishnaveni K

ಮುಂಬೈ , ಶನಿವಾರ, 6 ಜುಲೈ 2024 (08:44 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭವಿಷ್ಯದಲ್ಲಿ ಲಂಡನ್ ನಲ್ಲಿಯೇ ನೆಲೆಸಲು ತೀರ್ಮಾನಿಸಿದ್ದಾರೆ ಎಂಬ ಗುಸು ಗುಸು ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಅದಕ್ಕೆ ಪುಷ್ಠಿ ನೀಡುವಂತೆ ಮತ್ತೆ ಅವರು ಲಂಡನ್ ವಿಮಾನವೇರಿದ್ದಾರೆ.

ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ಟಿ20 ವಿಶ್ವಕಪ್ ಮುಗಿಸಿ ಬಾರ್ಬಡೋಸ್ ನಿಂದ ಭಾರತಕ್ಕೆ ಬಂದಿಳಿದಿದ್ದರು. ಮೊನ್ನೆಯಿಡೀ ತಂಡದ ಆಟಗಾರರ ಜೊತೆ ಕೊಹ್ಲಿ ಸಂಭ್ರಮಾಚರಣೆಯಲ್ಲಿ ಕಾಲ ಕಳೆದಿದ್ದರು. ಆದರೆ ಭಾರತಕ್ಕೆ ಬಂದು ಒಂದೇ ದಿನಕ್ಕೆ ವಿರಾಟ್ ಕೊಹ್ಲಿ ಮರಳಿ ಲಂಡನ್ ವಿಮಾನವೇರಿದ್ದಾರೆ.

ಮೊನ್ನೆ ಭಾರತ ತಂಡ ಮುಂಬೈನಲ್ಲಿ ಸಂಭ್ರಮಾಚರಣೆ ವೇಳೆ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಭಾಗಿಯಾಗಲ್ಲ ಎಂಬ ಸುದ್ದಿಗಳಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರು ಮನಸ್ಸು ಬದಲಾಯಿಸಿ ಕೊನೆಯವರೆಗೂ ತಂಡದ ಜೊತೆ ಸಂಭ್ರಮಾಚರಣೆಯ ಭಾಗವಾಗಿದ್ದರು.  ಆದರೆ ಇದಾದ ಮರುದಿನವೇ ಅವರು ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ.

ಎರಡನೇ ಮಗು ಅಕಾಯ್ ಜನನವೂ ಲಂಡನ್ ನಲ್ಲಿಯೇ ನಡೆದಿತ್ತು. ಇದಾದ ಬಳಿಕ ಕೊಹ್ಲಿ ಇನ್ನು ಮುಂದಿನ ದಿನಗಳಲ್ಲಿ ಸಂಸಾರ ಸಮೇತ ಲಂಡನ್ ಗೆ ಶಿಫ್ಟ್ ಆಗಲಿದ್ದಾರೆ ಎಂಬ ಮಾತುಗಳಿತ್ತು. ಆದರೆ ಕೆಲವು ತಿಂಗಳ ಬಳಿಕ ಅನುಷ್ಕಾ ಕೂಡಾ ಭಾರತಕ್ಕೆ ಮರಳಿದ್ದರು. ಆದರೆ ಕೆಲವೇ ದಿನ ಭಾರತದಲ್ಲಿದ್ದ ಜೋಡಿ ಈಗ ಮತ್ತೆ ಲಂಡನ್ ನತ್ತ ಪ್ರಯಾಣ ಬೆಳೆಸಿದೆ.

ಅನುಷ್ಕಾ ಶರ್ಮಾ ಈಗಾಗಲೇ ಲಂಡನ್ ನಲ್ಲಿದ್ದು ಕೊಹ್ಲಿ ಕೂಡಾ ಅವರನ್ನು ಸೇರಿಕೊಂಡಿದ್ದಾರೆ. ಇದನ್ನು ನೋಡಿದರೆ ಕೊಹ್ಲಿ ಮುಂದಿನ ದಿನಗಳಲ್ಲಿ ಲಂಡನ್ ನಲ್ಲಿಯೇ ಶಾಶ್ವತವಾಗಿ ತಳವೂರಲಿದ್ದಾರೆ ಎಂಬ ಮಾತುಗಳಿಗೆ ಪುಷ್ಠಿ ನೀಡುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈಗೆ ಹಾಗೆ ಬಂದು ಹೀಗೇ ಹೋದ ವಿರಾಟ್ ಕೊಹ್ಲಿ ವಿಮಾನವೇರಿದ್ದು ಎಲ್ಲಿಗೆ