Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ ಮದುವೆಗೆ ಇಲ್ಲಿ ಬರದಿದ್ದರೇನು, ಅಲ್ಲಿ ಹಾಜರಿರಲಿದ್ದಾರೆ ವಿರಾಟ್ ಕೊಹ್ಲಿ ದಂಪತಿ

Virat Kohli-Anushka Sharma

Krishnaveni K

ಲಂಡನ್ , ಮಂಗಳವಾರ, 16 ಜುಲೈ 2024 (10:58 IST)
ಲಂಡನ್: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ನಡೆದಿದ್ದ ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಈಗ ಅವರು ವಿವಾಹದ ನಂತರ ಲಂಡನ್ ನಲ್ಲಿ ನಡೆಯಲಿರುವ ಶಾಸ್ತ್ರಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಮುಕೇಶ್ ಅಂಬಾನಿ ತಮ್ಮ ಪುತ್ರನ ಮದುವೆಯನ್ನು ರಾಜವೈಭವದಿಂದ ನಡೆಸಿದ್ದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಮುಂಬೈ ಜಿಯೋ ಸೆಂಟರ್ ನಲ್ಲಿ ನಡೆಸಿದ್ದರು. ಈ ಮದುವೆಗೆ ದೇಶ-ವಿದೇಶದ ಅನೇಕ ಕ್ಷೇತ್ರದ ಗಣ್ಯರು ಬಂದು ಕುಣಿದು ಕುಪ್ಪಳಿಸಿದ್ದರು.

ಆದರೆ ವಿರಾಟ್ ಕೊಹ್ಲಿ ದಂಪತಿ ಮಾತ್ರ ಮುಂಬೈನಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಟಿ20 ವಿಶ್ವಕಪ್ ಮುಗಿಸಿ ಭಾರತಕ್ಕೆ ಬಂದ ಕೂಡಲೇ ವಿರಾಟ್ ಕೊಹ್ಲಿ ಲಂಡನ್ ನಲ್ಲಿದ್ದ ತಮ್ಮ ಪತ್ನಿ, ಮಕ್ಕಳನ್ನು ಸೇರಲು ವಿಮಾನವೇರಿದ್ದರು. ಹೀಗಾಗಿ ಇಲ್ಲಿನ ಮದುವೆ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದಾರೆ.

ಆದರೆ ಇಲ್ಲಿ ಹಾಜರರಿದ ಕೊಹ್ಲಿ ದಂಪತಿ ಈಗ ಲಂಡನ್ ನಲ್ಲಿ ಅಂಬಾನಿ ಕುಟುಂಬ ಆಯೋಜಿಸಿರುವ ವಿವಾಹ ನಂತರದ ಕಾರ್ಯಕ್ರಮಗಳಿಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಕೊಹ್ಲಿ ದಂಪತಿ ಕೃಷ್ಣ ದಾಸ್ ಅವರ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ವಿಚಿತ್ರವಾಗಿ ರೀಲ್ಸ್ ಮಾಡಿದ್ದಕ್ಕೆ ಯುವರಾಜ್ ಸಿಂಗ್, ಹರ್ಭಜನ್, ಸುರೇಶ್ ರೈನಾ ವಿರುದ್ಧ ಕೇಸ್