Publish Date: Sun, 14 Jul 2024 (11:13 IST)
Updated Date: Sun, 14 Jul 2024 (11:15 IST)
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಕಾರ್ಯಕ್ರಮವೆಂದರೆ ಸೆಲೆಬ್ರಿಟಿಗಳು ತಮ್ಮದೇ ಮನೆ ಸಮಾರಂಭವೆಂಬಂತೆ ಕುಟುಂಬ ಸಮೇತರಾಗಿ ಹಾಜರಾಗಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ಅನಂತ್ ಅಂಬಾನಿ ಮದುವೆಗೆ ಕೆಲವು ಪ್ರಮುಖ ಸಿನಿಮಾ, ಕ್ರಿಕೆಟ್ ತಾರೆಯರೇ ಗೈರಾಗಿದ್ದಾರೆ. ಇದಕ್ಕೆ ಕಾರಣವೇನೆಂದು ಇಲ್ಲಿ ನೋಡಿ.
ವಿರಾಟ್ ಕೊಹ್ಲಿ: ಕ್ರಿಕೆಟ್ ಜಗತ್ತಿನ ಜನಪ್ರಿಯ ತಾರೆ ವಿರಾಟ್ ಕೊಹ್ಲಿ ಅನಂತ್ ಅಂಬಾನಿಯ ಮದುವೆ ಪೂರ್ವ ಸಮಾರಂಭದಲ್ಲೂ ಭಾಗಿಯಾಗಿರಲಿಲ್ಲ. ಆಗಷ್ಟೇ ಅನುಷ್ಕಾ ಲಂಡನ್ ನಲ್ಲಿ ಎರಡನೇ ಮಗುವಿಗೆ ತಾಯಿಯಾಗಿದ್ದರು. ಹೀಗಾಗಿ ಕೊಹ್ಲಿ ಕೂಡಾ ಅಲ್ಲೇ ಇದ್ದರು. ಇದೀಗ ಮದುವೆ ಕಾರ್ಯಕ್ರಮಕ್ಕೂ ಕೊಹ್ಲಿ ದಂಪತಿ ಗೈರಾಗಿದ್ದಾರೆ. ಈಗಲೂ ಅವರು ಕುಟುಂಬ ಸಮೇತ ಲಂಡನ್ ನಲ್ಲಿದ್ದಾರೆ.
ರೋಹಿತ್ ಶರ್ಮಾ: ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನೂ ಆಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈಗ ಅವರು ಲಂಡನ್ ನಲ್ಲಿದ್ದು, ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಅಮೀರ್ ಖಾನ್: ಅಂಬಾನಿ ಕುಟುಂಬಕ್ಕೆ ಹತ್ತಿರದವರಾಗಿರುವ ಅಮೀರ್ ಖಾನ್ ಇದಕ್ಕೆ ಮೊದಲು ಜಾಮ್ನಾ ನಗರದಲ್ಲಿ ನಡೆದಿದ್ದ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಈಗ ಮದುವೆಗೆ ವೈಯಕ್ತಿಕ ಕಾರಣಗಳಿಂದ ಗೈರಾಗಿದ್ದಾರೆ.
ಅಕ್ಷಯ್ ಕುಮಾರ್: ಬಾಲಿವುಡ್ ನ ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್ ಈ ಹಿಂದೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈಗ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ ಎನ್ನಲಾಗಿದ್ದು, ಮದುವೆಯಿಂದ ದೂರವುಳಿದಿದ್ದಾರೆ.
ಕಂಗನಾ ರನೌತ್: ನಟ, ಹಾಲಿ ಸಂಸದೆಯೂ ಆಗಿರುವ ಕಂಗನಾ ರನೌತ್ ತಮ್ಮ ಸಹೋದರನ ಮದುವೆಯಲ್ಲಿ ಬ್ಯುಸಿಯಾಗಿದ್ದು ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಸೈಫ್ ಅಲಿ ಖಾನ್-ಕರೀನಾ ದಂಪತಿ: ಜಾಮ್ನಾ ನಗರದಲ್ಲಿ ನಡೆದಿದ್ದ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಸಂಸಾರ ಸಮೇತ ಹಾಜರಾಗಿದ್ದ ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ ಈಗ ಮದುವೆಗೆ ಗೈರಾಗಿದ್ದಾರೆ. ಮೂಲಗಳ ಪ್ರಕಾರ ದಂಪತಿ ಇಟೆಲಿಯಲ್ಲಿ ಹಾಲಿಡೇ ಮಾಡುತ್ತಿದ್ದಾರೆ.
ಸೊನಾಕ್ಷಿ ಸಿನ್ಹಾ ದಂಪತಿ: ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಸೊನಾಕ್ಷಿ ಸಿನ್ಹಾ ಮತ್ತು ಪತಿ ಝಹೀರ್ ಇಕ್ಬಾಲ್ ವೈಯಕ್ತಿಕ ಕಾರಣಗಳಿಂದ ಮದುವೆಗೆ ಗೈರಾಗಿದ್ದಾರೆ.