Select Your Language

Notifications

webdunia
webdunia
webdunia
webdunia

ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಮತ್ತೇ ಸಂಕಷ್ಟ

Jacqueliene Fernandez,

Sampriya

ಮುಂಬೈ , ಬುಧವಾರ, 10 ಜುಲೈ 2024 (15:49 IST)
Photo Courtesy X
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ ಬುಧವಾರ ವಿಚಾರಣೆಗೆ ಕರೆದಿದೆ ಎಂದು ವರದಿಯಾಗಿದೆ.

ಸುಕೇಶ್ ಚಂದ್ರಶೇಖರ್  ಅವರ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡೀಸ್ ಅವರನ್ನು ಬುಧವಾರ ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.

ವಿವಿಧ ವ್ಯಕ್ತಿಗಳಿಂದ ಗಣನೀಯ ಮೊತ್ತವನ್ನು ಸುಲಿಗೆ ಮಾಡಿದ ಆರೋಪ ಮತ್ತು ಐಷಾರಾಮಿ ಜೀವನಶೈಲಿಯನ್ನು ಉಳಿಸಿಕೊಳ್ಳಲು ಹಣವನ್ನು ಬಳಸಿಕೊಂಡ ಆರೋಪ ಹೊತ್ತಿರುವ ಚಂದ್ರಶೇಖರ್ ಅವರೊಂದಿಗಿನ ಸಂಬಂಧಕ್ಕಾಗಿ ಈ ಹಿಂದೆ ಇಡಿ ಅಧಿಕಾರಿಗಳು ಜಾಕ್ವೆಲಿನ್ ಅವರನ್ನು ಈ ಪ್ರಕರಣದಲ್ಲಿ ಹಲವು ಬಾರಿ ಪ್ರಶ್ನಿಸಿದ್ದರು.

ಫರ್ನಾಂಡೀಸ್ ಅವರಿಗೆ ಚಂದ್ರಶೇಖರ್ ಅವರು ಸುಲಿಗೆ ಮಾಡಿದ ಹಣದಿಂದ ದುಬಾರಿ ಉಡುಗೊರೆಯನ್ನು ನೀಡಿದ್ದಾರೆಂಬ ಆರೋಪವಿದೆ. ಅದಲ್ಲದೆ  ಹಣ ವರ್ಗಾವಣೆಗೆ ಸಹಭಾಗಿಯಾಗಿದ್ದಳು ಎಂಬ ಆರೋಪವೂ ಇದೆ. ಆದರೆ ಈ ಪ್ರಕರಣದಲ್ಲಿ ತಾನು ನಿರಾಪರಾಧಿ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಊಟ ಕೊಡಿ ಎಂದಿದ್ದ ದರ್ಶನ್ ಗೆ ಹೈಕೋರ್ಟ್ ಖಡಕ್ ಆದೇಶ