Select Your Language

Notifications

webdunia
webdunia
webdunia
webdunia

ಅನಂತ್ ಅಂಬಾನಿ ಮದುವೆಯಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ನಾನೊಂದು ತೀರ ನೀನೊಂದು ತೀರ

Aishwarya Rai-Aaradhya Bacchan

Krishnaveni K

ಮುಂಬೈ , ಶನಿವಾರ, 13 ಜುಲೈ 2024 (11:24 IST)
Photo Credit: X
ಮುಂಬೈ: ಅನಂತ್ ಅಂಬಾನಿ ಅದ್ಧೂರಿ ಮದುವೆ ಕಾರ್ಯಕ್ರಮಕ್ಕೆ ನಿನ್ನೆ ಸಂಜೆ ಬಚ್ಚನ್ ಪರಿವಾರ ಸಮೇತ ಬಂದಿತ್ತು. ಆದರೆ ಮಗ ಅಭಿಷೇಕ್ ಒಂದು ಕಡೆ ಸೊಸೆ ಐಶ್ವರ್ಯಾ ಒಂದು ಕಡೆ ಇದ್ದಿದ್ದು ಎಲ್ಲರ ಗಮನ ಸೆಳೆದಿದೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯಲಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇದರ ಬಗ್ಗೆ ಅಭಿಷೇಕ್ ಈಗಾಗಲೇ ಇದೆಲ್ಲಾ ಸುಳ್ಳು ಎಂದು ಪ್ರತಿಕ್ರಿಯಿಸಿದ್ದೂ ಇದೆ. ಹಾಗಿದ್ದರೂ ಇಬ್ಬರ ನಡೆ ಗಮನಿಸಿದರೆ ಯಾವುದೂ ಸರಿಯಿಲ್ಲ ಎಂದು ಪದೇ ಪದೇ ಪ್ರೂವ್ ಆಗುತ್ತಲೇ ಇರುತ್ತದೆ.

ಅನಂತ್ ಅಂಬಾನಿ ಮದುವೆಗೆ ಅಮಿತಾಭ್ ಬಚ್ಚನ್ ರ ಇಡೀ ಪರಿವಾರ ಬಂದಿತ್ತು. ಆದರೆ ಅಭಿಷೇಕ್ ಬಚ್ಚನ್, ತಮ್ಮ ತಂದೆ-ತಾಯಿ ಜಯಾ ಬಚ್ಚನ್, ಸಹೋದರಿ, ಮಕ್ಕಳ ಜೊತೆ ಬಂದು ಫೋಟೋಗೆ ಪೋಸ್ ಕೊಟ್ಟರು. ಆದರೆ ಐಶ್ವರ್ಯಾ ಅವರ ಹಿಂದೆಯೇ ಬಂದಿದ್ದರೂ ಅವರಿಂದ ಪ್ರತ್ಯೇಕವಾಗಿ ಮಗಳು ಆರಾಧ್ಯ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಅಭಿಷೇಕ್ ಕೂಡಾ ಪತ್ನಿ, ಮಗಳ ಜೊತೆ ಪೋಸ್ ಕೊಡುವ ಗೋಜಿಗೆ ಹೋಗದೇ ತಮ್ಮ ತಂದೆ-ತಾಯಿಯ ಜೊತೆ ಮುಂದೆ ನಡೆದಿದ್ದಾರೆ. ಇದನ್ನು ನೋಡಿ ವಿಚ್ಛೇದನ ವದಂತಿಗಳೆಲ್ಲಾ ನಿಜವಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುವಂತಾಗಿದೆ. ಜೊತೆಗೆ ಬಚ್ಚನ್ ಪರಿವಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪ್ರೂವ್ ಆದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್ ವೈರಲ್