Select Your Language

Notifications

webdunia
webdunia
webdunia
webdunia

ಪುತ್ರಿ ಆರಾಧ್ಯ ಜತೆ ಅಮ್ಮನ ಬರ್ತ್​​ಡೇ ಆಚರಿಸಿದ ಕರಾವಳಿ ಬೆಡಗಿ ಐಶ್ವರ್ಯಾ ರೈ

Aishwarya

sampriya

ಮುಂಬೈ , ಶುಕ್ರವಾರ, 24 ಮೇ 2024 (15:07 IST)
Photo By Instagram
ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್‌ನ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪುತ್ರಿ ಆರಾಧ್ಯ ಅವರೊಂದಿಗೆ ತಮ್ಮ ತಾಯಿ ಬೃಂದಾ ರೈ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಅಮ್ಮನ ಹುಟ್ಟುಹಬ್ಬದ ಆಚರಣೆಯ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್​ನಲ್ಲಿ ತುಳುನಾಡಿನ ಬೆಡಗಿ ಐಶ್ವರ್ಯ ಹಂಚಿಕೊಂಡಿದ್ದಾರೆ. ಐಶ್ವರ್ಯ ಅವರು ತಾಯಿ ಬೃಂದಾ, ಮಗಳು ಆರಾಧ್ಯ ಮತ್ತು ಕೆಲವು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಚಿತ್ರಕ್ಕೆ ಪೋಸ್ ನೀಡುವುದನ್ನು ಕಾಣಬಹುದು.

ಲವ್ ಯು ಬರ್ತ್ ಡೇ ಗರ್ಲ್, ಡಿಯರ್ ಮಮ್ಮಿ-ದೊಡ್ಡಾ ಎಂದು ಐಶ್ವರ್ಯಾ ರೈ ಬಚ್ಚನ್ ಬರದುಕೊಂಡಿದ್ದಾರೆ. ತನ್ನ ತಾಯಿಯ ಫೋಟೋವನ್ನು ಹಂಚಿಕೊಂಡ ಬಾಲಿವುಡ್‌ನ ಹಿರಿಯ ನಟಿ ಮತ್ತೊಂದು ಪೋಸ್ಟ್​ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಅಮ್ಮ. ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಉಮ್ರಾವ್ ಜಾನ್, ಗುರು, ಕುಚ್ ನಾ ಕಹೋ ಮತ್ತು ರಾವಣ್ ಚಿತ್ರ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಯಾಗಿರುವ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್ 20, 2007 ರಂದು ವಿವಾಹವಾಗಿದ್ದರು. ದಂಪತಿಗಳು ತಮ್ಮ ಮಗಳು ಆರಾಧ್ಯಳನ್ನು 2011ರಲ್ಲಿ ಸ್ವಾಗತಿಸಿದ್ದರು.

ಐಶ್ವರ್ಯಾ ರೈ ಬಚ್ಚನ್ ಕೊನೆಯ ಬಾರಿಗೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ತ್ರಿಷಾ, ವಿಕ್ರಮ್, ಕಾರ್ತಿ, ಜಯಂ ರವಿ, ಶೋಭಿತಾ ಧುಲಿಪಾಲ ಮತ್ತು ಐಶ್ವರ್ಯಾ ಲಕ್ಷ್ಮಿ ಅವರೊಂದಿಗೆ ಕಾಣಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕಿ ಸುಬ್ಬಲಕ್ಷ್ಮೀ ಜೀವನಚರಿತ್ರೆ ಸಿನಿಮಾದಲ್ಲಿ ಕೀರ್ತಿ ಸುರೇಶ್