Select Your Language

Notifications

webdunia
webdunia
webdunia
webdunia

ಕೈ ಮುರಿದಿದ್ದರೂ ಕ್ಯಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್

Aishwarya Rai Bacchan

Krishnaveni K

ಮುಂಬೈ , ಶುಕ್ರವಾರ, 17 ಮೇ 2024 (11:30 IST)
Photo Courtesy: Twitter
ಮುಂಬೈ: ಕೈ ಮುರಿದಿದ್ದರೂ ಕ್ಯಾನ್ ಚಿತ್ರೋತ್ಸವದಲ್ಲಿ ಸ್ಟೈಲಿಶ್ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹೆಜ್ಜೆ ಹಾಕಿದ್ದಾರೆ. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಪ್ಪು ಮತ್ತು ಬಿಳಿ ಜೊತೆಗೆ ಗೋಲ್ಡನ್ ಬಣ್ಣದ ಗೌನ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಐಶ್ವರ್ಯಾ ರೈಗೆ ವಿದೇಶದಲ್ಲೂ ಆರಾಧಕರಿದ್ದಾರೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಐಶ್ವರ್ಯಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದನ್ನು ನೋಡುವುದಕ್ಕೇ ಪ್ರತ್ಯೇಕ ಅಭಿಮಾನಿ ವರ್ಗದವರಿದ್ದಾರೆ.

ಅದರಲ್ಲೂ ಕ್ಯಾನ್ ಚಿತ್ರೋತ್ಸವವನ್ನು ಅವರು ತಪ್ಪಿಸುವುದೇ ಇಲ್ಲ. ಇದೀಗ ಅವರ ಕೈಗೆ ಪೆಟ್ಟಾಗಿದೆ. ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕ್ಯಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.  ಇಂತಹ ಸಂದರ್ಭದಲ್ಲಿಯೂ ನೆಪ ಹೇಳದೇ ಕ್ಯಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಕ್ಕೆ ಅವರಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2002 ರಿಂದ ಐಶ್ವರ್ಯಾ ತಪ್ಪದೇ ಕ್ಯಾನ್ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಒಟ್ಟು 21 ಬಾರಿ ಈ ಚಿತ್ರೋತ್ಸವದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಪ್ರತೀ ಬಾರಿಯೂ ಅವರು ಯಾವ ಡ್ರೆಸ್ ಹಾಕುತ್ತಾರೆ ಎಂದೇ ಫ್ಯಾಶನ್ ಪ್ರಿಯರು ಕಾಯುತ್ತಿರುತ್ತಾರೆ. ಈ ಬಾರಿಯೂ ಅವರ ಡ್ರೆಸ್ ಎಲ್ಲರ ಗಮನ ಸೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರಿಲೀಸ್ ಆದ್ರೂ ರಿಯಲ್ ಸ್ಟಾರ್ ಉಪೇಂದ್ರ ಎ ಸಿನಿಮಾಗೆ ಭರ್ಜರಿ ಬೇಡಿಕೆ