ಮುಂಬೈ: ಕನ್ನಡದಿಂದ ತೆಲುಗಿಗೆ ಹಾರಿ ಈಗ ಬಾಲಿವುಡ್ ಅಂಗಳಕ್ಕೆ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಬಿಗ್ ಆಫರ್ ಒಂದನ್ನು ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗುವ ಅದೃಷ್ಟ ಸಲ್ಮಾನ್ ಗೆ ಬಂದೊದಗಿದೆ.
ಸಲ್ಮಾನ್ ಖಾನ್ ನಾಯಕರಾಗಿರುವ ಸಿಕಂದರ್ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗುತ್ತಿದ್ದಾರೆ. ಈ ಸಿನಿಮಾವನ್ನು ಸೌತ್ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಕೆಲವು ಫ್ಲಾಪ್ ಬಳಿಕ ಶಾರುಖ್ ಖಾನ್ ರಂತೇ ಸಲ್ಮಾನ್ ಕೂಡಾ ಸೌತ್ ನಿರ್ದೇಶಕರ ಹಿಂದೆ ಬಿದ್ದಿದ್ದಾರೆ.
ಸಿಕಂದರ್ ಸಿನಿಮಾ 2025 ರ ಈದ್ ಹಬ್ಬದ ವೇಳೆ ರಿಲೀಸ್ ಆಗಲಿದೆ. ಇದೀಗ ರಶ್ಮಿಕಾ ಮತ್ತು ಸಲ್ಮಾನ್ ಜೊತೆಯಾಗಿ ನಟಿಸುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಜೋಡಿ ಜೊತೆಯಾಗಿ ನಟಿಸಿದರೆ ಸಿನಿಮಾ ದಾಖಲೆ ಮಟ್ಟದಲ್ಲಿ ಗಳಿಕೆ ಮಾಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ.
ಈ ಮೊದಲು ರಶ್ಮಿಕಾ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಗೆ ನಾಯಕಿಯಾಗಿ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಜೊತೆಗೆ ರಶ್ಮಿಕಾಗೂ ಬಾಲಿವುಡ್ ನಲ್ಲಿ ಹೆಸರು ತಂದುಕೊಟ್ಟಿತ್ತು. ಇದೀಗ ಅವರು ಸಲ್ಮಾನ್ ಗೆ ನಾಯಕಿಯಾಗುವ ಅದೃಷ್ಟ ಪಡೆದುಕೊಂಡಿದ್ದಾರೆ.