Select Your Language

Notifications

webdunia
webdunia
webdunia
webdunia

ಬೇಕೆಂದೇ ರಾಮಾಯಣ ಸಿನಿಮಾದ ರಣಬೀರ್ ಕಪೂರ್ ಲುಕ್ ಲೀಕ್ ಮಾಡಿತಾ ಚಿತ್ರತಂಡ

Ranbir Kapoor-Sai Pallavi

Krishnaveni K

ಮುಂಬೈ , ಶನಿವಾರ, 27 ಏಪ್ರಿಲ್ 2024 (12:37 IST)
Photo Courtesy: Twitter
ಮುಂಬೈ: ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ನಾಯಕರಾಗಿರುವ ರಾಮಾಯಣ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಇದರ ನಡುವೆ ಚಿತ್ರದ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಪ್ರಭು ರಾಮನಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಸೀತಾಮಾತೆಯ ಪಾತ್ರವನ್ನು ಸೌತ್ ಸುಂದರಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ನಿರ್ಮಾಪಕರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಒಬ್ಬರು.

ಇದೀಗ ರಣಬೀರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯ ಗೆಟಪ್ ನಲ್ಲಿ ಶೂಟಿಂಗ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇವರಿಬ್ಬರನ್ನೂ ನೋಡಿದ ನೆಟ್ಟಿಗರು ರಾಮ-ಸೀತೆಯ ಪಾತ್ರಕ್ಕೆ ಈ ಜೋಡಿ ಹೇಳಿ ಮಾಡಿಸದಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳು ತಮ್ಮ ಲುಕ್ ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳುತ್ತಾರೆ. ಆದರೆ ಈ ಸಿನಿಮಾದ ಶೂಟಿಂಗ್ ಸೆಟ್ ಫೋಟೋಗಳು ವೈರಲ್ ಆಗಿರುವುದನ್ನು ನೋಡಿ ನೆಟ್ಟಿಗರು ಬಹುಶಃ ಚಿತ್ರದ ಬಗ್ಗೆ ಕುತೂಹಲ ಕ್ರಿಯೇಟ್ ಮಾಡಲು ಚಿತ್ರತಂಡವೇ ಫೋಟೋ ಲೀಕ್ ಮಾಡಿರಬಹುದು ಎಂದು ಊಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವೀ ಪತಿಗೆ ಲಿಪ್ ಕಿಸ್: ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಹಾಟ್ ಫೋಟೋ ಶೂಟ್