Publish Date: Thu, 14 Dec 2023 (10:29 IST)
Updated Date: Thu, 14 Dec 2023 (10:29 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್ ಎಂದು ಘೋಷಣೆ ಮಾಡಿದ್ದಾರೆ.
ಆದರೆ ಅದಕ್ಕಿಂತ ಮೊದಲು ಯಶ್ ಬಾಲಿವುಡ್ ಸಿನಿಮಾವೊಂದರಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಲಿರುವ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು.
ಈ ಸಿನಿಮಾ ಮುಂದಿನ ವರ್ಷ ಬೇಸಿಗೆಯಲ್ಲಿ ಸೆಟ್ಟೇರಲಿದೆ. ಹೀಗಾಗಿ ಯಶ್ ಏಕಕಾಲಕ್ಕೆ ಈ ಸಿನಿಮಾ ಮತ್ತು ತಮ್ಮ ಟಾಕ್ಸಿಕ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.
ಆದರೆ ಯಶ್ ರಾವಣನ ಪಾತ್ರ ಮಾಡುವ ಬಗ್ಗೆ ಅವರೇ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಹನುಮಂತನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಯಾವುದೂ ಇನ್ನೂ ಅಧಿಕೃತವಾಗಿಲ್ಲ.