Select Your Language

Notifications

webdunia
webdunia
webdunia
webdunia

ಕೆಸಿಸಿ ಟೂರ್ನಿಯಲ್ಲಿ ದರ್ಶನ್, ಯಶ್ ಯಾಕಿಲ್ಲ ಎಂದಾಗ ಗರಂ ಆದ ಕಿಚ್ಚ ಸುದೀಪ್

ಕೆಸಿಸಿ ಟೂರ್ನಿಯಲ್ಲಿ ದರ್ಶನ್, ಯಶ್ ಯಾಕಿಲ್ಲ ಎಂದಾಗ ಗರಂ ಆದ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 14 ಡಿಸೆಂಬರ್ 2023 (10:10 IST)
Photo Courtesy: Twitter
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಟೂರ್ನಿಯಲ್ಲಿ ಯಶ್, ದರ್ಶನ್ ಯಾಕೆ ಭಾಗಿಯಾಗುತ್ತಿಲ್ಲ ಎಂದು ಕೇಳಿದಾಗ ಕಿಚ್ಚ ಸುದೀಪ್ ಗರಂ ಆದರು.

ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಮೆಂಟ್ ನಲ್ಲಿ ದರ್ಶನ್, ಯಶ್, ಶೆಟ್ಟಿ ಗ್ಯಾಂಗ್ ಭಾಗವಹಿಸುವುದಿಲ್ಲ. ಈ ಬಗ್ಗೆ ಕಿಚ್ಚನಿಗೆ ಮಾಧ‍್ಯಮಗೋಷ್ಠಿಯಲ್ಲಿ ಪ್ರಶ್ನೆ ಎದುರಾಯ್ತು.

ಮೊದಲು ರಾಜ್ ಬಿ ಶೆಟ್ಟಿ, ರಿಷಬ್, ರಕ್ಷಿತ್ ಶೆಟ್ಟಿ ಯಾಕೆ ಭಾಗಿಯಾಗುತ್ತಿಲ್ಲ ಎಂದು ಪ್ರಶ್ನೆ ಬಂತು. ಆಗ ಉತ್ತರಿಸಿದ ಸುದೀಪ್, ಅವರನ್ನು ಕರೆದಿದ್ದೇವೆ. ಆದರೆ ಹಾಗೇ ಬಂದು ಹೋಗುತ್ತೇವೆ, ಕ್ರಿಕೆಟ್ ಆಡಲ್ಲ ಅಂತಾರೆ. ಅವರೆಲ್ಲಾ ನಮ್ಮ ಹುಡುಗರು. ಟೆನಿಸ್ ಬಾಲ್ ನಲ್ಲಿ ಕ್ರಿಕೆಟ್ ಆಡುವುದು ಬೇರೆ. ಲೆದರ್ ಬಾಲ್ ನಲ್ಲಿ ಆಡುವಾಗ ಪ್ರಾಕ್ಟೀಸ್ ಬೇಕಾಗುತ್ತದೆ. ಆದರೆ ಅವರು ಕ್ರಿಕೆಟ್ ಆಡಲ್ಲ. ರಿಷಬ್ ಬರ್ತೀನಿ, ಬರ್ತೀನಿ ಅಂತಾರೆ ಆದರೆ ಆಡಲ್ಲ. ಇನ್ನು, ರಾಜ್ ಬಿ ಶೆಟ್ಟಿ ಗರುಡಗಮನ ಸಿನಿಮಾದಲ್ಲಿ ಅಡಿದ್ದೇನಲ್ಲಾ ಅಷ್ಟೇ ಅಂತಾರೆ. ರಕ್ಷಿತ್ ಕ್ರಿಕೆಟ್ ನ ಮೊದಲ ಅಕ್ಷರ ಕೇಳಿದಾಗಲೇ ಇಲ್ಲ ಅಂತಾರೆ. ಹಾಗಾಗಿ ಅವರನ್ನೆಲ್ಲಾ ಬನ್ನಿ ಎಂದು ಒತ್ತಾಯಿಸುವುದು ಹೇಗೆ? ಎಂದಿದ್ದಾರೆ.

ನಂತರ ಯಶ್ ಮತ್ತು ದರ್ಶನ್ ಬರಲ್ವಾ ಎಂಬ ಪ್ರಶ್ನೆ ಬಂದಾಗ ಸುದೀಪ್ ಕೊಂಚ ಗರಂ ಆದರು. ನಾವು ಎಲ್ಲರನ್ನೂ ಕರೆದಿದ್ದೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಕೆಸಿಸಿ ಟೂರ್ನಿ ನನ್ನೊಬ್ಬನದಲ್ಲ. ನಾವು ಯಾರಿಗೂ ಪ್ರತ್ಯೇಕವಾಗಿ ಕರೆಯಬೇಕಾಗಿಲ್ಲ. ಕೆಸಿಸಿ ಎಂಬುದು ಬಲವಂತ ಅಲ್ಲ, ಗೌರವ. ಕೆಲವರು ಆಡಲು ಬರಲ್ಲ, ಗ್ರೌಂಡ್ ಗೆ ಬರ್ತೀವಿ ಅಂತಾರೆ. ನಾವು ಏನು ಮಾಡಕ್ಕಾಗುತ್ತದೆ?’ ಎಂದು ಸುದೀಪ್ ಮರು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯ ಜೊತೆ ವಿಜಯ್ ದೇವರಕೊಂಡ ಲಿಂಕ್ ಅಪ್ ಸುದ್ದಿ ಪ್ರಕಟಿಸಿದ ಯೂ ಟ್ಯೂಬರ್ ಅರೆಸ್ಟ್