Publish Date: Thu, 14 Dec 2023 (09:50 IST)
Updated Date: Thu, 14 Dec 2023 (09:57 IST)
ಹೈದರಾಬಾದ್: ನಟಿಯೊಬ್ಬರ ಜೊತೆ ಲಿಂಕ್ ಅಪ್ ಮಾಡಿ ಅಸಭ್ಯ ಸುದ್ದಿಯೊಂದನ್ನು ಪ್ರಕಟಿಸಿದ್ದ ಯೂ ಟ್ಯೂಬರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸಿನಿಪೊಲಿಸ್ ಎಂಬ ಯೂ ಟ್ಯೂಬ್ ವಾಹಿನಿಯೊಂದು ವಿಜಯ್ ದೇವರಕೊಂಡ ಮತ್ತು ಓರ್ವ ನಟಿಯ ನಡುವೆ ಸಂಬಂಧದ ಕುರಿತಂತೆ ಅಸಭ್ಯ ಸುದ್ದಿ ಪ್ರಸಾರ ಮಾಡಿತ್ತು. ಇದು ವಿಜಯ್ ಗಮನಕ್ಕೆ ಬಂದಿದೆ.
ಈ ಸಂಬಂಧ ವಿಜಯ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆ ಯೂಟ್ಯೂಬ್ ವಾಹಿನಿಯ ಅಡ್ಮಿನ್ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೆ, ವಿಡಿಯೋ ಡಿಲೀಟ್ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ.
ಯೂ ಟ್ಯೂಬ್ ವಾಹಿನಿಗಳಲ್ಲಿ ದಿನ ಬೆಳಗಾದರೆ ಸ್ಟಾರ್ ಗಳ ಕುರಿತು ಅನೇಕ ಸುಳ್ಳು ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತವೆ. ಇವು ಮಿತಿ ಮೀರಿದಾಗ ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯ.