Select Your Language

Notifications

webdunia
webdunia
webdunia
webdunia

ಪ್ರಚಾರಕ್ಕೆ ರಶ್ಮಿಕಾ-ವಿಜಯ್ ಹಾಲಿಡೇ ಫೋಟೋ: ಹಾಯ್ ನಾನಾ ಸಿನಿಮಾ ತಂಡದ ಮೇಲೆ ಫ್ಯಾನ್ಸ್ ಗರಂ

ಪ್ರಚಾರಕ್ಕೆ ರಶ್ಮಿಕಾ-ವಿಜಯ್ ಹಾಲಿಡೇ ಫೋಟೋ: ಹಾಯ್ ನಾನಾ ಸಿನಿಮಾ ತಂಡದ ಮೇಲೆ ಫ್ಯಾನ್ಸ್ ಗರಂ
ಹೈದರಾಬಾದ್ , ಶುಕ್ರವಾರ, 1 ಡಿಸೆಂಬರ್ 2023 (09:00 IST)
ಹೈದರಾಬಾದ್: ಮೃಣಾಲ್ ಠಾಕೂರ್ ಮತ್ತು ನಾನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಾಯ್ ನಾನಾ ಸಿನಿಮಾ ಪ್ರಚಾರದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಫೋಟೋ ಬಳಸಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಹಾಯ್ ನಾನಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ವೇದಿಕೆಯ ದೊಡ್ಡ ಪರದೆಯ ಮೇಲೆ ರಶ್ಮಿಕಾ ಮತ್ತು ವಿಜಯ್ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಫೋಟೋವೊಂದನ್ನು ಎಡಿಟ್ ಮಾಡಿ ಜೊತೆಯಾಗಿರುವಂತೆ ತೋರಿಸಲಾಗಿದೆ. ತಮಾಷೆಗಾಗಿ ಇಂತಹದ್ದೊಂದು ಎಡಿಟ್ ಮಾಡಿದ ಫೋಟೋವನ್ನು ಪರದೆ ಮೇಲೆ ತೋರಿಸಿದಾಗ ಮೃಣಾಲ್ ಅಚ್ಚರಿಗೊಂಡರೆ, ನಾನಿ ನಗುತ್ತಾ ಕುಳಿತಿದ್ದರು.

ಈ ಫೋಟೋ ಈಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಸಲಿಗೆ ಈ ಸಿನಿಮಾಗೂ ವಿಜಯ್-ರಶ್ಮಿಕಾಗೂ ಸಂಬಂಧವೇ ಇಲ್ಲ. ಹಾಗಿದ್ದರೂ ಇಬ್ಬರ ನಡುವಿನ ಡೇಟಿಂಗ್ ರೂಮರ್ ನ್ನು ಸಿನಿಮಾ ಪ್ರಚಾರಕ್ಕೆ ಬಳಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿಮಗೆ ಸಿನಿಮಾಗೆ ಪಬ್ಲಿಸಿಟಿ ಬೇಕೆಂದರೆ ಇಷ್ಟು ಕೀಳು ಮಟ್ಟಕ್ಕೆ ಇಳಿಯಬೇಕಾ? ಅಲ್ಲಿ ಕುಳಿತಿರುವ ನಟರಿಗೂ ಸ್ವಲ್ಪ ಕಾಮನ್ ಸೆನ್ಸ್ ಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್‌ಲಾಕ್ ದೃಶ್ಯಗಳಲ್ಲೂ ನಟಿಸಲು ಸಿದ್ದ ಎಂದ ಹಾಟ್ ನಟಿ ತಮನ್ನಾ