Publish Date: Tue, 28 Nov 2023 (09:59 IST)
Updated Date: Wed, 29 Nov 2023 (05:47 IST)
ಹೈದರಾಬಾದ್: ಇತ್ತೀಚೆಗೆ ಸ್ಟಾರ್ ನಟರು ಸಂಭಾವನೆಯನ್ನು ವಿವಿಧ ರೂಪದಲ್ಲಿ ಪಡೆಯುತ್ತಾರೆ. ಬಾಲಿವುಡ್ ನಲ್ಲಿ ಇದು ಸಾಮಾನ್ಯ ಸಂಗತಿ. ಇದೀಗ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲೂ ಟ್ರೆಂಡ್ ಆಗುತ್ತಿದೆ.
ಸಿನಿಮಾ ಲಾಭದಲ್ಲಿ ಶೇರು ಪಡೆಯುವುದು, ಇಲ್ಲವೇ ಸಂಭಾವನೆ ಬದಲಾಗಿ ಕಾರು, ಸೈಟ್ ಹೀಗೆ ದುಬಾರಿ ಉಡುಗೊರೆ ಪಡೆಯುವುದು ಸಾಮಾನ್ಯವಾಗುತ್ತಿದೆ.
ಇದೀಗ ಪುಷ್ಪ 2 ಸಿನಿಮಾಗೂ ಅಲ್ಲ ಅರ್ಜುನ್ ಇದೇ ರೀತಿ ಬೇಡಿಕೆಯಿಟ್ಟಿದ್ದಾರೆ. ಪುಷ್ಪ 2 ಸಿನಿಮಾಗೆ ಇಂತಿಷ್ಟು ಎಂದು ಸಂಭಾವನೆ ಪಡೆಯದೇ ಇರಲು ಅಲ್ಲು ನಿರ್ಧರಿಸಿದ್ದಾರೆ. ಅದರ ಬದಲು ಸಿನಿಮಾದ ಲಾಭದಲ್ಲಿ ಪಾಲು ಪಡೆಯಲಿದ್ದಾರೆ.
ಪುಷ್ಪ 2 ಸಿನಿಮಾ ಒಟ್ಟಾರೆ ಎಷ್ಟು ಲಾಭ ಮಾಡುತ್ತೋ ಅದರ ಶೇ.33 ರಷ್ಟು ಪಾಲು ಕೊಡಲು ಅಲ್ಲು ಅರ್ಜುನ್ ಬೇಡಿಕೆಯಿಟ್ಟಿದ್ದಾರಂತೆ. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಂದು ವೇಳೆ ಪುಷ್ಪ 2 ತೆರಿಗೆ ಕಡಿತದ ಬಳಿಕ 1000 ಕೋಟಿ ರೂ. ಲಾಭ ಮಾಡಿದರೆ ಅಲ್ಲು ಅರ್ಜುನ್ 300 ಕೋಟಿಯಷ್ಟು ಸಂಭಾವನೆ ಪಡೆಯಲಿದ್ದಾರೆ!