ನವದೆಹಲಿ: ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಾಳೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಟಾಲಿವುಡ್ ತಾರೆ ಅಲ್ಲು ಅರ್ಜುನ್ ಪತ್ನಿ ಸಮೇತರಾಗಿ ದೆಹಲಿಗೆ ತೆರಳಿದ್ದಾರೆ.
ಈ ಬಾರಿ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಕನ್ನಡದ ಚಾರ್ಲಿ ಸಿನಿಮಾವೂ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿತ್ತು.
ನಾಳೆ ರಾಷ್ಟ್ರಪತಿಗಳು ವಿವಿಧ ಭಾಷೆಗಳ ವಿವಿಧ ವಿಭಾಗಗಳ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಇದಕ್ಕಾಗಿ ಇಂದು ಅಲ್ಲು ಅರ್ಜುನ್ ಪತ್ನಿ ಸೇಹಾ ರೆಡ್ಡಿ ಜೊತೆ ದೆಹಲಿಗೆ ತೆರಳಿದ್ದಾರೆ.