Publish Date: Wed, 11 Oct 2023 (17:27 IST)
Updated Date: Wed, 11 Oct 2023 (17:30 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ರವಿತೇಜ ನೀಡಿದ ಹೇಳಿಕೆಯೊಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.
ಸಂದರ್ಶನವೊಂದರಲ್ಲಿ ರವಿತೇಜಗೆ ಕೆಲವು ನಟರ ಹೆಸರು ಹೇಳಿ ಆ ನಟರಿಂದ ಏನು ಕದಿಯಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಈ ನಟರ ಹೆಸರಿನ ಜೊತೆ ಯಶ್ ಹೆಸರೂ ಇತ್ತು.
ಅದಕ್ಕೆ ಉತ್ತರಿಸುವಾಗ ರವಿತೇಜ್ ಯಶ್ ಅವರ ಕೆಜಿಎಫ್ ಸಿನಿಮಾ ಮಾತ್ರ ನಾನು ನೋಡಿದ್ದೆ. ಆ ಸಿನಿಮಾ ಸಿಗಲು ಅವರು ಅದೃಷ್ಟ ಮಾಡಿದ್ದರು ಎಂದಿದ್ದರು. ಇದಕ್ಕೆ ಯಶ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಯಶ್ ಅದೃಷ್ಟದಿಂದ ಬಂದ ನಟರಲ್ಲ. ಒಬ್ಬ ಬಸ್ ಕಂಡಕ್ಟರ್ ಮಗನಾಗಿ ಸ್ವಂತ ಪರಿಶ್ರಮದಿಂದ ಬೆಳೆದು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಮಾತನಾಡುವಾಗ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.