Publish Date: Mon, 16 Oct 2023 (09:46 IST)
Updated Date: Mon, 16 Oct 2023 (09:47 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಇನ್ ಸ್ಟಾಗ್ರಾಂ ಖಾತೆ ಇದ್ದಕ್ಕಿದ್ದಂತೆ ಮಾಯವಾಗಿದೆ. ಅವರೇ ಡಿಲೀಟ್ ಮಾಡಿದ್ದಾರಾ ಅಥವಾ ತಾಂತ್ರಿಕ ಕಾರಣಗಳಿಂದ ಡಿಲೀಟ್ ಆಗಿದೆಯೇ ಎಂದು ತಿಳಿದುಬಂದಿಲ್ಲ.
ಪ್ರಭಾಸ್ ಗೆ ಇನ್ ಸ್ಟಾಗ್ರಾಂನಲ್ಲಿ 10 ಮಿಲಿಯನ್ ಷ್ಟು ಫಾಲೋವರ್ ಗಳಿದ್ದರು. ಕೆಲವು ಸಮಯದ ಹಿಂದಷ್ಟೇ ಅವರು ಇನ್ ಸ್ಟಾಗ್ರಾಂ ಖಾತೆ ತೆರೆದಿದ್ದರು. ತಮ್ಮ ಸಿನಿಮಾ ಕುರಿತಾದ ವಿಚಾರಗಳನ್ನು ಇನ್ ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದರು.
ಆದರೆ ಇದೀಗ ಸಲಾರ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಇನ್ ಸ್ಟಾ ಖಾತೆಯನ್ನು ಡಿಲೀಟ್ ಮಾಡಿದ್ದೇಕೆ ಎಂಬ ಕಾರಣ ತಿಳಿದುಬಂದಿಲ್ಲ.