Publish Date: Sat, 14 Oct 2023 (09:00 IST)
Updated Date: Sat, 14 Oct 2023 (09:09 IST)
ಹೈದರಾಬಾದ್: ತೆಲುಗಿನಲ್ಲಿ ಈಗಷ್ಟೇ ತಳವೂರುತ್ತಿರುವ ಕನ್ನಡತಿ ಶ್ರೀಲೀಲಾ ಬಗ್ಗೆ ಈಗ ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಕೇಳಿಬರುತ್ತಿದೆ.
ಶ್ರೀಲೀಲಾ ಇದೀಗ ಭಗವಂತ ಕೇಸರಿ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ ಬಾಲಯ್ಯ ಮಗಳಾಗಿ ನಟಿಸಿದ್ದಾರೆ. ಅದರ ಬೆನ್ನಲ್ಲೇ ಈಗ ಶ್ರೀಲೀಲಾ ಸದ್ಯದಲ್ಲೇ ನಿಜ ಜೀವನದಲ್ಲಿ ಬಾಲಯ್ಯ ಮಗಳನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಬಾಲಯ್ಯ ಪುತ್ರ ಮೋಕ್ಷಗಣನ ಜೊತೆ ಓಡಾಡುತ್ತಿದ್ದಾರೆ, ಅವರನ್ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಸುದ್ದಿಗಳನ್ನು ಸ್ವತಃ ಶ್ರೀಲೀಲಾ ನಿರಾಕರಿಸಿದರೂ ಅನುಮಾನ ನಿವಾರಣೆಯಾಗಿಲ್ಲ.